DC vs SRH Match | ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ ಇಲೆವನ್
ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ಸ್ ಪ್ರವೇಶಿಸಬೇಕಾದ್ರೆ ಇನ್ನುಳಿ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಪ್ರತಿ ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ 15 ನೇ ಆವೃತ್ತಿಯ ಅಂತಿಮ ನಾಲ್ಕತಘಟ್ಟ ತಲುಪಲು ಸಾಧ್ಯವಾಗುತ್ತದೆ. ಹೀಗಾಗಿ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗೆಲುವೊಂದೇ ಮಂತ್ರವಾಗಿ ಡೆಲ್ಲಿ ಅಖಾಡಕ್ಕೆ ಇಳಿಯಲಿದೆ.
ಹೌದು..! ಇಂಡಿಯನ್ ಪ್ರಿಮಿಯರ್ ಲೀಗ್ ನ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಗೆಲುವಿಗಾಗಿ ಉಭಯ ತಂಡಗಳು ಗುದ್ದಾಟ ನಡೆಸಲಿವೆ.
ರಿಷತ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಈ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಂಭತ್ತು ಪಂದ್ಯಗಳನ್ನಾಡಿದ್ದು, ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನುಳಿದ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ಡೆಲ್ಲಿಗೆ ಪ್ಲೇ ಆಫ್ಸ್ ಚಾನ್ಸ್ ಇದೆ. ಈ ಕಾರಣಕ್ಕಾಗಿ ಡೆಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿದೆ.
ಅಂದಹಾಗೆ ಕಳೆದ ಪಂದ್ಯದಗಳಲ್ಲಿ ಡೆಲ್ಲಿ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಆರು ರನ್ ಗಳಿಂದ ಸೋಲು ಕಂಡಿದೆ. ಡೆಲ್ಲಿ ಪರ ಅಕ್ಷರ್ ಪಟೇಲ್ 42 ರನ್ , ಪಂತ್ 44 ರನ್ ಗಳಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮ್ಯಾಚ್ ವಿನ್ನರ್ ಗಳಿದ್ದರೂ ಅದೃಷ್ಠ ಕೈ ಕೊಡುತ್ತಿದೆ. ಆಟಗಾರರು ಸಾಂಘಿಕ ಹೋರಾಟ ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆ ತಪ್ಪುಗಳನ್ನು ಸರಿಪಡಿಸಿಕೊಂಡರು ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಡೆಲ್ಲಿ ಡೇವಿಡ್ ವಾರ್ನರ್ ಆಟವನ್ನೇ ನೆಚ್ಚಿಕೊಂಡಿದೆ. ನಾಯಕ ರಿಷಬ್ ಪಂತ್ ಒತ್ತಡಕ್ಕೆ ಸಿಲುಕಿ ಆಡುತ್ತಿದ್ದಾರೆ. ಪೃಥ್ವಿ ಶಾ ಸ್ಫೋಟಕ ಆಟವನ್ನು ಆಡಿದ್ರೂ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಿಲ್ಲ. ಆಲ್ ರೌಂಡರ್ ಮಿಟ್ಚೆಲ್ ಮಾರ್ಶ್ ಅವರಿಂದ ನಿರೀಕ್ಷಿತ ಆಟ ಹೊರಬರುತ್ತಿಲ್ಲ. ಹೀಗಾಗಿ ಅವರ ಬದಲಿಗೆ ಯಶ್ ಧೂಲ್ ಗೆ ಅವಕಾಶ ನೀಡಬಹುದು. ಇನ್ನೊಂದೆಡೆ ಲಲಿತ್ ಯಾದವ್ ಸ್ಥಾನ ಕೂಡ ಅಲುಗಾಡುತ್ತಿದೆ.
ಇನ್ನು ರೊವ್ಮನ್ ಪೊವೆಲ್ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಆದ್ರೂ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.
ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ ಕೂಡ ಮೊನಚು ಕಳೆದುಕೊಂಡಂತೆ ಭಾಸವಾಗುತ್ತಿದೆ. ಮುಷ್ತಾಫಿಝುರ್ ರಹಮಾನ್ ಮತ್ತು ಕುಲದೀಪ್ ಯಾದವ್ ತಂಡದ ಟ್ರಂಪ್ ಕಾರ್ಡ್ ಬೌಲರ್. ಚೇತನ್ ಸಕಾರಿಯ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ.
ಪ್ಲೇಯಿಂಗ್ ಇಲೆವೆನ್
ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ರಿಷಭ್ ಪಂತ್ (c & wk), ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ
DC vs SRH Match Delhi Capitals team Playing XI