DC vs SRH Match | ಗೆಲುವಿಗಾಗಿ ಡೆಲ್ಲಿ – ಹೈದರಾಬಾದ್ ಹೋರಾಟ
ಇಂಡಿಯನ್ ಪ್ರಿಮಿಯರ್ ಲೀಗ್ ನ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಗೆಲುವಿಗಾಗಿ ಉಭಯ ತಂಡಗಳು ಗುದ್ದಾಟ ನಡೆಸಲಿವೆ.
ರಿಷತ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಕೇನ್ ವಿಲಿಯಂ ಸನ್ ಸಾರಥ್ಯದ ಸನ್ ರೈಸರ್ಸ್ ಹೈದರಾಬಾದ್ ತಂಡ ಐದನೇ ಸ್ಥಾನದಲ್ಲಿದೆ.
ಈ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಂಭತ್ತು ಪಂದ್ಯಗಳನ್ನಾಡಿದ್ದು, ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನುಳಿದ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ಡೆಲ್ಲಿಗೆ ಪ್ಲೇ ಆಫ್ಸ್ ಚಾನ್ಸ್ ಇದೆ. ಈ ಕಾರಣಕ್ಕಾಗಿ ಡೆಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿದೆ.
ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ಒಂಭತ್ತು ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪ್ಲೇ ಆಫ್ಸ್ ದೃಷ್ಠಿಯಿಂದ ಹೈದರಾಬಾದ್ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ.
ಅಂದಹಾಗೆ ಕಳೆದ ಪಂದ್ಯದಗಳಲ್ಲಿ ಡೆಲ್ಲಿ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಿತ್ತು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಆರು ರನ್ ಗಳಿಂದ ಸೋಲು ಕಂಡಿದೆ.
ಡೆಲ್ಲಿ ಪರ ಅಕ್ಷರ್ ಪಟೇಲ್ 42 ರನ್ , ಪಂತ್ 44 ರನ್ ಗಳಿಸಿದ್ದರು. ಅದೇ ರೀತಿ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೋರಾಟ ನಡೆಸಿತ್ತು.
ಈ ವೇಳೆ ಎಸ್ ಆರ್ ಹೆಚ್ 13 ರನ್ ಗಳಿಂದ ಸೋಲು ಕಂಡಿತ್ತು. ಕೇನ್ ವಿಲಿಯಂ ಸನ್ 47 ಮತ್ತು ಪೂರನ್ 64 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮ್ಯಾಚ್ ವಿನ್ನರ್ ಗಳಿದ್ದರೂ ಅದೃಷ್ಠ ಕೈ ಕೊಡುತ್ತಿದೆ. ಆಟಗಾರರು ಸಾಂಘಿಕ ಹೋರಾಟ ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ.
ಆರಂಭಿಕರಾಗಿ ಬರುವ ಡೆವಿಡ್ ವಾರ್ನರ್, ಪೃಥ್ವಿ ಶಾ ತಂಡಕ್ಕೆ ಉತ್ತಮ ಆರಂಭ ನೀಡಬೇಕಿದೆ. ವಾರ್ನರ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರೂ ಪೃಥ್ವಿ ಶಾ ಅಸ್ಥಿರ ಆಟ ಮುಂದುವರೆದಿದೆ.
ಮಿಚೆಲ್ ಮಾರ್ಷ್ ಆಗಮನದಿಂದಾಗಿ ಮಿಡಲ್ ಆರ್ಡರ್ ಸಮಸ್ಯೆ ಬಗೆಹರಿದಿದೆ. ರಿಷಬ್ ಪಂತ್ ಬ್ಯಾಟ್ ನಿಂದ ರನ್ ಗಳು ಬರುತ್ತಿರೋದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಲಲತ್ ಯಾದವ್ ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ರೋವ್ ಮನ್ ಪೊವೆಲ್, ಅಕ್ಷರ್ ಪಟೇಲ್, ಶರ್ದೂಲ್ ಠಾಕೂರ್ ಬ್ಯಾಟಿಂಗ್ ನಲ್ಲಿ ಒಳ್ಳೆ ಟಚ್ ನಲ್ಲಿದ್ದಾರೆ.
ಇನ್ನು ಬೌಲಿಂಗ್ ವಿಚಾರಕ್ಕೆ ಬಂದರೇ ಕುಲ್ ದೀಪ್ ಯಾದವ್ ತಂಡದ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದಾರೆ. ಜೊತೆಗೆ ಶರ್ದೂಲ್ ಠಾಕೂರ್ ಮಿಡಲ್ ಓವರ್ ಗಳಲ್ಲಿ ವಿಕೆಟ್ ಪಡೆಯುತ್ತಿರೋದು ತಂಡಕ್ಕೆ ಕೂಡಿ ಬರುತ್ತಿದೆ.
ಇನ್ನು ಪವರ್ ಪ್ಲೇ ನಲ್ಲಿ ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ ಉತ್ತವಾಗಿ ದಾಳಿ ನಡೆಸುತ್ತಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿಚಾರಕ್ಕೆ ಇಂಚೂರಿ ಸಮಸ್ಯೆ ಕಾಡುತ್ತಿದೆ. ಆಲ್ ರೌಂಡರ್ ವಾಷಿಂಗ್ ಟನ್ ಸುಂದರ್ ಇಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ.
ಹಾಗೆ ಯಾರ್ಕರ್ ಕಿಂಗ್ ಟಿ ನಟರಾಜನ್ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಇಬ್ಬರು ಇಂದಿನ ಪಂದ್ಯವನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಇದು ಹೊರತು ಪಡಿಸಿದರೇ ತಂಡಕ್ಕೆ ಸಾಂಘಿಕ ಆಟವೇ ಆಸ್ತಿಯಾಗಿದೆ. ಕೇನ್ ವಿಲಿಯಂ ಸನ್, ಅಭಿಷೇಕ್ ಶರ್ಮಾ ಆರಂಭಿಕರಾಗಿ ಮಿಂಚುತ್ತಿದ್ದಾರೆ.
ಕೇನ್ ಶಾಂತವಾಗಿ ಇನ್ನಿಂಗ್ಸ್ ಕಟ್ಟಿದರೇ ಅಭಿಷೇಕ್ ರನ್ ರೇಟ್ ಕಡಿಮೆಯಾಗದಂತೆ ನೋಡಿಕೊಳ್ಳುತ್ತಾರೆ. ಮಿಡಲ್ ಆರ್ಡರ್ ನಲ್ಲಿ ರಾಹುಲ್ ತ್ರಿಪಾಠಿ, ಐಡನ್ ಮಾರ್ಕ್ರಾಂ, ನಿಕೋಲಸ್ ಪೂರನ್ ಅದ್ಭುತ ಫಾರ್ಮ್ ನಲ್ಲಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಶಶಾಂಕ್ ಸಿಂಗ್ ಕೊನೆಯ ಓವರ್ ಗಳಲ್ಲಿ ಅಬ್ಬರಿಸುತ್ತಿದ್ದಾರೆ.
ಬೌಲಿಂಗ್ ನಲ್ಲಿ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲ. ಭುವನೇಶ್ವರ್ ಕುಮಾರ್, ಮಾರ್ಕೋ ಜಾನ್ಸೆನ್, ನಟರಾಜನ್, ಉಮ್ರಾನ್ ಮಲ್ಲಿಕ್ ವಿಕೆಟ್ ಬೇಟೆಯಾಡುತ್ತಿರುವುದು ಪಂದ್ಯದ ಗೆಲುವಿಗೆ ಕಾರಣವಾಗಿದೆ.
dc-vs-srh-match-srh vs dc prediction who will win