Dcm Ashwath Narayan
ಮೈಸೂರು: ಈ ಹಿಂದಿನ ಅಸ್ಥಿರ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಜನರು ರವನ್ನ ಬೆಂಬಲಿಸುತ್ತಾರೆ. ಎಂದು ಡಿಸಿಎಂ ಸಿ.ಎನ್. ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಜನರನ್ನು ಭಾವನಾತ್ಮಕವಾಗಿ ತಿರುಗಿಸುವ ಕೆಲಸ ಮಾಡುತ್ತಿವೆ. ಜನರಿಗೆ ಇವರ ತಪ್ಪುಗಳು ಗೊತ್ತಿವೆ. ಇವರು ಯಾವ ಪ್ರತಿಷ್ಠೆ ಇಟ್ಟುಕೊಂಡು ಮಾತನಾಡುತ್ತಿದ್ದಾರೆ? ಇಲ್ಲಿ ಯಾವ ಪ್ರತಿಷ್ಠೆ ಮುಖ್ಯವಲ್ಲ, ಜನರು ಇಟ್ಟಿರುವ ನಂಬಿಕೆ ಮುಖ್ಯ ಎಂದರು.

ಇನ್ನೂ ಕಳೆದ ಬಾರಿಯ ಸರಿಯಾದ ಸರ್ಕಾರ ಇರಲಿಲ್ಲ, ಅಸ್ಥಿರ ಸರ್ಕಾರ ಇತ್ತು. ಈಗಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಕಚ್ಚಾಟ ನಡೆಸುತ್ತಿವೆ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ಕಚ್ಚಾಟವನ್ನು ಬಯಲು ಮಾಡಿಕೊಳ್ಳುತ್ತಿದ್ದಾರೆ. ಜೊತೆಯಲ್ಲೆ ಇದ್ದು ಗುಂಡಿ ತೋಡುತ್ತಿದ್ದರು ಅಂತ ಜೆಡಿಎಸ್‌ಗೆ ಗೊತ್ತಾಗಿದೆ.
ಇದು ಅಧಿಕಾರದಲ್ಲಿ ಇದ್ದಾಗ, ಇಲ್ಲದಿದ್ದಾಗ ಕುಮಾರಸ್ವಾಮಿ ಅವರಿಗೆ ಗೊತ್ತಾಗಿದೆ. ಜೊತೆಯಲ್ಲೇ ಇದ್ದು ಈ ರೀತಿ ಕುತಂತ್ರ ಮಾಡಿದರು ಅಂತ ಅವರಿಗೆ ಗೊತ್ತಾಗಿದೆ. ಇದೆಲ್ಲ ರಾಜ್ಯದ ಜನತೆಗೂ ಗೊತ್ತಾಗಿದೆ. ಜನರು ಸ್ಥಿರವಾದ ಸರ್ಕಾರ ಕೊಡ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ. ಜನರಿಗೆ ಸ್ಥಿರ ಸರ್ಕಾರ ಬೇಕು. ಹೀಗಾಗಿ, ಅವರು ಬಿಜೆಪಿ ಜೊತೆ ಇರುತ್ತಾರೆ.
ಆರ್ ಆರ್ ನಗರ ಕ್ಷೇತ್ರದಲ್ಲಿ ಮತ್ತೆ ಶುರುವಾಯ್ತಾ ಓಟರ್ ಐಡಿ ಮಾಫಿಯಾ..?
ಸಿದ್ದರಾಮಯ್ಯ ಅವರಿಗೆ ಮಾತಾಡಲು ಯಾವ ನೈತಿಕತೆ ಇಲ್ಲ. ಬರ ಬಂದಾಗ ಜನರಿಗೆ ಸ್ಪಂದಿಸದೆ ಇದ್ದವರು ಅವರು. ಅಧಿಕಾರದಲ್ಲಿದ್ದ ವೇಳೆ ಒಂದು ಪ್ರವಾಸ ಮಾಡದೆ ಇದ್ದವರು ಸಿದ್ದರಾಮಯ್ಯ. ಇದೀಗಾ ಏನ್ ಬೇಕೋ ಹಾಗೆ ಹೇಳಿಕೆ ಕೊಡ್ತಿದ್ದಾರೆ ಎಂದು ಟೀಕಿಸಿದರು.
Dcm Ashwath Narayan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








