ಬೆಂಗಳೂರು : ಕೊರೊನಾ ನಿಯಂತ್ರಣ ಮಾಡಲು ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ರಾಜ್ಯವು ಈಗ ಆರ್ಥಿಕವಾಗಿ ಚೇತರಿಕೆ ಕಾಣುತ್ತಿದೆ. ಆಸ್ಪತ್ರೆಗಳಲ್ಲಿ ಕೊರೊನಾ ಪ್ರಾರಂಭದಲ್ಲಿ ಸಮಸ್ಯೆಗಳಿದ್ದವು. ಆದರೆ ಈಗ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ಡಿಸಿಎಂ ಸಿ.ಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಉಪಮುಖ್ಯಮಂತ್ರಿ ಡಿಸಿಎಂ ಸಿ.ಎನ್ ಅಶ್ವತ್ ನಾರಾಯಣ್, ಲಾಕ್ ಡೌನ್ ಒಂದೇ ಪರಿಹಾರವಲ್ಲ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಡ್ ಗಳ ಸಮಸ್ಯೆಯಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ 3500 ಬೆಡ್ ಸೇರಿದಂತೆ ಒಟ್ಟು 6000 ಬೆಡ್ ಗಳಿವೆ.
ಇನ್ನೂ ಆಸ್ಪತ್ರೆಗಳಲ್ಲಿ ಊಟದ ಸಮಸ್ಯೆಯಿದೆ ಎಂದು ಹೇಳಾಗಿತ್ತು. ಆದರೆ ಆಸ್ಪತ್ರೆಗಳಲ್ಲಿ ಊಟದ ಸಮಸ್ಯೆಯಿಲ್ಲ. ತಾಜ್ ವೆಸ್ಟೆಂಡ್ ಹೋಟೆಲ್ ನಿಂದ ಊಟ ತರಿಸಿಕೊಡಲಾಗುತ್ತಿದೆ. ಕೆಲವರ ಬಯಕೆಯಂತೆ ಸ್ವಿಗ್ಗಿಯಿಂದ ತಿಂಡಿ ತರಿಸಿಕೊಡುತ್ತಿದ್ದೇವೆ. ಆದರೆ ನನ್ನ ಸ್ವಂತ ಹಣದಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಮಾದ್ಯಮದ ಮುಂದೆ ಹೇಳಿಕೊಳ್ಳಬಾರದು ಎಂದು ಸುಮ್ಮನೆ ಇದ್ದೇ ಅಷ್ಟೇ ಎಂದು ಹೇಳಿದ್ದಾರೆ.
ಪ್ರಾರಂಭದಲ್ಲಿ ಪಿಪಿಇ ಕಿಟ್ ಸಮಸ್ಯೆಯಿತ್ತು. ಇದೀಗ ಅದರ ಸಮಸ್ಯೆ ಸಹ ಬಗೆ ಹರಿದಿದೆ. ವೈದ್ಯಕೀಯ ಶಿಕ್ಷಣ ಸಚಿವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ನಾವೆಲ್ಲ ಟಾಸ್ಕ ಪೋರ್ಸ್ ನಲ್ಲಿದ್ದೇವೆ. ಕೆಲಸ ಮಾಡುತ್ತೇವೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಲಾಕ್ ಡೌನ್ ಮಾಡಿದರೇ ಆರ್ಥಿಕ ಸಂಕಷ್ಟ ಎದರುರಾಗುತ್ತದೆ. ಇದು ಈಗಾಗಲೇ ನಮ್ಮ ಅನುಭವಕ್ಕೆ ಬಂದಿದೆ. ಲಾಕ್ ಡೌನ್ ಮಾಡಿ ಬೇರೆ ನಗರಗಳು ತತ್ತರಿಸಿವೆ. ನಾವು ನಿಧಾನವಾಗಿ ಆರ್ಥಿಕವಾಗಿ ಚೇತರಿಕೆ ಕಾಣುತ್ತಿದ್ದೇವೆ.
ಕೊರೊನಾ ನಿಯಂತ್ರಣ ಮಾಡುವುದರಲ್ಲಿ ನಮ್ಮ ರಾಜ್ಯ ಮಾದರಿಯಾಗಿದೆ. ಜಿಲ್ಲಾ ಆಸ್ಪತ್ರೆಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಮತ್ತು ಸಿಎಂ ಬಿ,ಎಸ್, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಕೊರೊನಾ ನಿಯಂತ್ರಣದ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಸಿ.ಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ








