ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಮಾ.3ರಂದು ಗಲ್ಲು ಶಿಕ್ಷೆ ಜಾರಿ ಅಸಾಧ್ಯವಾಗಿದೆ. ಫೆಬ್ರವರಿ 17ರಂದು ವಿಚಾರಣಾ ನ್ಯಾಯಾಲಯ ನಿರ್ಭಯಾ ಅತ್ಯಾಚಾರಿಗಳನ್ನು, ಮಾರ್ಚ್ 3ರಂದು ಬೆಳಗಿನ ಜಾವ 6 ಗಂಟೆಗೆ ಗಲ್ಲು ಶಿಕ್ಷೆ ವಿಧಿಸಲು ಸಮಯ ನಿಗದಿಸಿ ಆದೇಶ ನೀಡಿತ್ತು. ಅಲ್ಲದೆ ಪ್ರತ್ಯೇಕವಾಗಿ ಗಲ್ಲು ಶಿಕ್ಷೆ ವಿಧಿಸಲು ಸಾಧ್ಯವಿಲ್ಲವೆಂದು, ನಾಲ್ವರನ್ನು ಒಟ್ಟಿಗೆ ನೇಣುಕಂಬಕ್ಕೇರಿಸುವಂತೆಯೂ ಹೈಕೋರ್ಟ್ ಆದೇಶಿಸಿತು.
ಅಪರಾಧಿಗಳ ಪೈಕಿ ಪವನ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದ್ದರೆ, ಕ್ಷಮಾದಾನ ನಿರಾಕರಿಸಲಾಗಿರುವ ಅಕ್ಷಯ್ ಇದನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಸರಕಾರವು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ಮಾರ್ಚ್ 5ರಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಹೀಗಾಗಿ ಅಪರಾಧಿಗಳನ್ನು ಮಾರ್ಚ್ 3ರಂದು ಗಲ್ಲಿಗೇರಿಸುವುದು ಅಸಾಧ್ಯವಾಗಿದ್ದು, ನಿರ್ಭಯಾ ಅಪರಾಧಿಗಳಿಗೆ ಮತ್ತೊಮ್ಮೆ ನೇಣು ಶಿಕ್ಷೆಯಿಂದ ಕೆಲ ಸಮಯದ ಜೀವ ಭಿಕ್ಷೆ ಸಿಕ್ಕಿದೆ.








