ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಕಳೆಬರಹ ಪತ್ತೆ
ಚಾಮರಾಜನಗರ: ಹುಲಿಯೊಂದು ಕಾದಾಟದಲ್ಲಿ ಮೃತಪಟ್ಟಿದ್ದು, ಹುಲಿಯ ಕಳೆಬರಹ ಪತ್ತೆಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, 6 ರಿಂದ 7 ವರ್ಷ ವಯಸ್ಸಿನ ಹುಲಿ ಮೃತಪಟ್ಟಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಹುಲಿಯ ಉಗುರುಗಳು ಮತ್ತು ಹಲ್ಲುಗಳು ಸುರಕ್ಷಿತವಾಗಿದ್ದು, ಹುಲಿಯ ದೇಹ ಕೊಳೆತ ಸ್ಥತಿಯಲ್ಲಿ ಪತ್ತಿಯಾಗಿದೆ.
ಹುಲಿಯ ಕಳೇಬರ ಸಿಕ್ಕ ಪ್ರದೇಶವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವನ್ಯಜೀವಿ ವಲಯದ ಅರದೇವನಕಟ್ಟೆ ಪ್ರದೇಶಕ್ಕೆ ಒಳಪಟ್ಟಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಹುಲಿಯ ದೇಹವನ್ನು ಅಂತ್ಯಕ್ರಿಯೆ ಮಾಡಲಾಗಿದೆ.