ಪಿಎಂ ಕಿಸಾನ್ ಯೋಜನೆ – ಇಕೆವೈಸಿ ಪೂರ್ಣಗೊಳಿಸಲು ಗಡುವು ವಿಸ್ತರಣೆ…
ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ಇಕೆವೈಸಿ ಪೂರ್ಣಗೊಳಿಸಲು ಸರ್ಕಾರ ಗಡುವನ್ನು ವಿಸ್ತರಿಸಿದೆ. ಈ ವರ್ಷದ ಮಾರ್ಚ್ 31 ರಂದು ಮುಕ್ತಾಯಗೊಳ್ಳಬೇಕಿದ್ದ ಗಡುವನ್ನು ಮೇ 22, 2022 ರವರೆಗೆ ವಿಸ್ತರಿಸಲಾಗಿದೆ. “ಎಲ್ಲಾ ಪಿಎಂ ಕಿಸಾನ್ ಫಲಾನುಭವಿಗಳಿಗೆ ಇಕೆವೈಸಿಯ ಗಡುವನ್ನು 22 ಮೇ 2022 ರವರೆಗೆ ವಿಸ್ತರಿಸಲಾಗಿದೆ” ಎಂದು ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿನ ಟಿಪ್ಪಣಿಯಲ್ಲಿ ಹೇಳಿದೆ. ಎಲ್ಲಾ ಫಲಾನುಭವಿ ರೈತರು ತಮ್ಮ ವಾರ್ಷಿಕ ಹಣವನ್ನು ಪಡೆಯಲು ಇಕೆವೈಸಿ ಕಡ್ಡಾಯವಾಗಿದೆ ಎಂಬುದನ್ನು ಗಮನಿಸಬೇಕು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಅಥವಾ PM-KISAN, ಕೇಂದ್ರ ಸರ್ಕಾರದ ನೇರ ಲಾಭ ವರ್ಗಾವಣೆ (DBT) ಯೋಜನೆಯಾಗಿದ್ದು, ಇದರ ಅರ್ಹ ರೈತರಿಗೆ ಮತ್ತು ಅವರ ಕುಟುಂಬಕ್ಕೆ ವಾರ್ಷಿಕವಾಗಿ 6,000 ರೂ. ಹಣವನ್ನು ಪ್ರತಿ ವರ್ಷ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್‌ನಲ್ಲಿ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಆರ್ಥಿಕ ಬೆಂಬಲ ಅಗತ್ಯವಿರುವಂಥಹ ರೈತ ಕುಟುಂಬಗಳಿಗೆ ಪಿಂಚಣಿ ನೀಡಲು, ಪ್ರಧಾನಿ ಕಿಸಾನ್ ಯೋಜನೆಯನ್ನು 2018 ರ ಡಿಸೆಂಬರ್‌ನಲ್ಲಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಪ್ರಾರಂಭಿಸಲಾಯಿತು,
ಈ ಕಂತುಗಳನ್ನು ಬಿಡುಗಡೆ ಮಾಡಲು, PM-KISAN ಪೋರ್ಟಲ್, ರೈತರ ಆಧಾರ್ ಡೇಟಾವನ್ನು ಬಳಸುತ್ತದೆ, ಅದಕ್ಕಾ eKYC ಯನ್ನಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. PM-KISAN ವೆಬ್‌ಸೈಟ್‌ನ ಪ್ರಕಾರ, “PMKISAN ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ. ದಯವಿಟ್ಟು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ. OTP ದೃಢೀಕರಣದ ಮೂಲಕ ಆಧಾರ್ ಆಧಾರಿತ eKYC ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಎಂದು ಪಿ ಎಂ ಕಿಸಾನ್ ವೆಬ್ ಸೈಟ್ ಹೇಳಿದೆ.








