ಯುರೋಪ್ ನಲ್ಲಿ ಭೀಕರ ಪ್ರವಾಹ : 150 ಸಾವು – ಜರ್ಮನಿಯಲ್ಲಿ ಹೆಚ್ಚಿನ ತೊಂದರೆ
ಜರ್ಮನಿ : ಯುರೋಪ್ ನ ಪಶ್ಚಿಮ ಭಾಗಗಳಲ್ಲಿ ಭಾರಿ ಮಳೆಯಾಗ್ತಾಯಿದ್ದು, ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಅನೇಕರು ಜೀವ ಕಳೆದುಕೊಂಡಿದ್ದಾರೆ.. ಪ್ರವಾಹದಲ್ಲಿ ಈವರೆಗೂ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಕೂಡ ವೇಗ ಪಡೆದುಕೊಂಡಿದೆ..
ಪ್ರವಾಹ ಪೀಡಿತ ಪ್ರದೇಶವಾದ ಜರ್ಮನಿಯ ಅಹ್ರ್ವೀಲರ್ ಕೌಂಟಿಯಲ್ಲಿ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಪ್ರವಾಹದಿಂದಾಗಿ ಅತಿ ಹೆಚ್ಚು ಹಾನಿ ಉಂಟಾಗಿದೆ ಎನ್ನಲಾಗಿದೆ. ಇನ್ನೂ ರಹಿನೆಲ್ಯಾಂಡ್-ಪಾಲಟಿನೇಟ್ನಲ್ಲಿ 63 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.. ಪ್ರವಾಹ ಪೀಡಿತ ಪ್ರದೇಶಗಳಿಂದ ನೀರಿನ ಮಟ್ಟ ಕಡಿಮೆಯಾಗಿದೆ. ಆದರೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಹಲವು ಕಾರು, ಟ್ರಕ್ ಗಳಲ್ಲಿ ಜನರ ಶವಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಜರ್ಮನಿಯಲ್ಲಿ ಉಂಟಾಗಿರುವ ಪ್ರವಾಹದಿಂದ ಹಲವು ರಾಜ್ಯಗಳಲ್ಲಿ ಮನೆಗಳು ಕುಸಿದು ಜನರು ನಿರಾಶ್ರಿತರಾಗಿದ್ದು, 70ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ತೀವ್ರ ಪ್ರವಾಹದಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 45ಕ್ಕೆ ಏರಿದೆಯಾಗಿದೆ. ರೈನ್ಲ್ಯಾಂಡ್-ಪ್ಯಾಲಟಿನೇಟ್ ಮತ್ತು ನಾರ್ತ್ ರೈನ್-ವೆಸ್ಟ್ಫಾಲಿ ರಾಜ್ಯಗಳಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗಿದ್ದು, ಕಲೋನ್ ಪ್ರದೇಶದಲ್ಲಿ ಮಾತ್ರ, ಕನಿಷ್ಠ 20 ರಿಂದ 30 ಜನರು ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ರೈನ್ಲ್ಯಾಂಡ್-ಪ್ಯಾಲಟಿನೇಟ್ನ ಅಹರ್ವೀಲರ್ ಜಿಲ್ಲೆಯಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. 50ರಿಂದ 70 ಜನರು ಕಾಣೆಯಾಗಿದ್ದಾರೆ ಎಂದು ಆಂತರಿಕ ಸಚಿವ ರೋಜರ್ ಲೆವೆಂಟ್ಜ್ ತಿಳಿಸಿದ್ದಾರೆ. 200,000 ಜನಸಂಖ್ಯೆ ಇರುವ ಲೀಜ್ನಗರದಲ್ಲಿರುವ ಮ್ಯೂಸ್ ನದಿಯು ಅಪಾಯದ ಮಟ್ಟವನ್ನು ಮೀರಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವೆರ್ವಿಯರ್ಸ್ ನಗರದಲ್ಲೂ ಹಲವಾರು ಶವಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.