ಹೈದರಾಬಾದ್ : ಕೊರೊನಾ ಲಾಕ್ ಡೌನ್ ನಿಂದಾಗಿ ತೊಂದರೆ ಅನುಭವಿಸುತ್ತಿರುವ ಶೂ ವ್ಯಾಪಾರಿವೊಬ್ಬ ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್ ಅವರ ಗೃಹ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಲಕ್ ಪೇಟೆ ಮೂಲದ ವ್ಯಾಪಾರಿ ಮೊಹಮ್ಮದ್ ನಜೀರುದ್ದೀನ್, ಸಿಎಂ ಅಧಿಕೃತ ನಿವಾಸವಾದ ಪ್ರಗತಿ ಭವನದ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಅಲ್ಲೇ ಇದ್ದ ಭಧ್ರತಾ ಸಿಬ್ಬಂದಿ ಆತನಿಂದ ಪೆಟ್ರೋಲ್ ಬಾಟಲಿಯನ್ನು ಕಸಿದುಕೊಂಡಿದ್ದಾರೆ. ನಂತರ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಪಂಜಗುಟ್ಟ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಲಾಕ್ ಡೌನ್ ಹಿನ್ನಲ್ಲೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ನಜೀರುದ್ದೀನ್, ಖಾಸಗಿ ಚಿಟ್ ಫಂಡ್ ಕಂಪನಿಯಲ್ಲಿ 20 ಲಕ್ಷ ರೂಪಾಯಿ ಸಾಲವನ್ನೂ ಮಾಡ್ಕೊಂಡಿದ್ದಾನೆನ್ನಲಾಗಿದೆ. ಇತ್ತೀಚಿಗೆ ಈ ಚಿಟ್ ಫಂಡ್ ಕಂಪೆನಿಯಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.








