ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ದಾವಣಗೆರೆಯಲ್ಲಿ ಇಂದು 70ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ನಾಲ್ಕುಮಂದಿ ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 18 ರ ಗಡಿ ದಾಟಿದೆ.
57 ವರ್ಷದ ಮಹಿಳೆ, 53 ವರ್ಷದ ವ್ಯಕ್ತಿ, 62 ವರ್ಷದ ವೃದ್ಧೆ ಹಾಗೂ 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಇನ್ನೂ ದಾವಣಗೆರೆಯಲ್ಲಿ-37, ಚನ್ನಗಿರಿಯಲ್ಲಿ -10, ಜಗಳೂರಿನಲ್ಲಿ-7, ಹೊನ್ನಾಳಿಯಲ್ಲಿ-7, ಹರಿಹರದಲ್ಲಿ-7 ಸೇರಿದಂತೆ 70 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಬೆಣ್ಣೆ ನಗರಿ ಜನರನ್ನು ಮತ್ತಷ್ಟು ಆತಂಕ್ಕೀಡಾಗುವಂತೆ ಮಾಡಿದೆ.








