ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದಾಗಿ 6 ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಆರೋಪವೊಂದು ಕೇಳಿ ಬಂದಿದೆ.
ದುಡ್ಡು ಕಟ್ಟಿಲ್ಲ ಎಂದು ವೈದ್ಯರಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿಯೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಜಿಲ್ಲೆಯ ಕಂಗ್ರಾಳ ಗಲ್ಲಿಯ ನಿವಾಸಿ ಆರತಿ ಅನಿಲ್ ಚವ್ಹಾಣ (30) ಎಂದು ಗುರುತಿಸಲಾಗಿದೆ. ಗರ್ಬಿಣಿಯು ಮಂಗಳವಾರ ಹೊಟ್ಟೆನೋವಿನಿಂದಾಗಿ ಜಿಲ್ಲೆಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮದ್ಯಾಹ್ನ ವೈದ್ಯರು, ಮಗುವು ಹೊಟ್ಟೆಯಲ್ಲೇ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಆಗ 30 ಸಾವಿರ ರೂ. ಕಟ್ಟುವಂತೆ ಹೇಳಿದ್ದಾರೆ.
ಆ ವೇಳೆ 10 ಸಾವಿರ ರೂ. ಹಣವನ್ನು ಕಟ್ಟಿ, ಉಳಿದ ಹಣವನ್ನು ಆಮೇಲೆ ಕಟ್ಟುವುದಾಗಿ ಕುಟುಂಬಸ್ಥರು ಹೇಳಿದ್ದರು. ಬಾಕಿ ಹಣ ಕಟ್ಟದೇ ಇರುವ ಕಾರಣ ಗರ್ಭಿಣಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಆದ್ದರಿಂದ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಈಗ ಆಸ್ಪತ್ರೆ ವಿರುದ್ಧ ಆರೋಪಿಸಿದ್ದಾರೆ. ಅಲ್ಲದೇ, ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ (KhadeBazar Police Station) ದೂರು ದಾಖಲಾಗಿದೆ.