ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ : ಮಹಿಳೆ ಸಾವು Hassan saaksha tv
ಹಾಸನ : ಪೂಜೆಯ ನೆಪದಲ್ಲಿ ನಡೆದ ಹಲ್ಲೆಯಿಂದ ಮಹಿಳೆ ಪ್ರಾಣತೆತ್ತಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದಲ್ಲಿ ನಡೆದಿದೆ. ಗೌಡಗೆರೆ ಗ್ರಾಮದ ಪಾರ್ವತಿ(47) ಮೃತ ಮಹಿಳೆಯಾಗಿದ್ದಾರೆ.
ಪಾರ್ವತಿ ಅವರು ಕಳೆದ ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಹೋದರು ಗುಣಮುಖವಾಗಿಲ್ಲ ಎಂಬ ಕಾರಣಕ್ಕೆ ದೇವರಿಗೆ ಮೊರೆ ಹೋಗಿದ್ದರು. ಈ ವೇಳೆ ಡಿಸೆಂಬರ್7 ರಂದು ಪೂಜೆ ಮಾಡಿ ತಲೆನೋವು ಗುಣಪಡಿಸುವುದಾಗಿ ಬೆಕ್ಕ ಗ್ರಾಮದ ಪಿರಿಯಾಪಟ್ಟಣದಮ್ಮ ದೇವರ ಪೂಜಾರಿ ಮಧು, ಬೆತ್ತದಿಂದ ತಲೆಯ ಮೇಲೆ ಹೊಡೆದಿದ್ದಾರೆ.
ಬೆತ್ತದ ಏಟಿಗೆ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಹಾಸನದ ಹಿಮ್ಸ್ ಗೆ ದಾಖಲಿಸಲಾಗಿತ್ತು. ಆದ್ರೆ ಮಹಿಳೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಇತ್ತ ಪೂಜಾರಿ ವಿರುದ್ಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.