ಆಟೋದಿಂದ ಆಯಾ ತಪ್ಪಿ ಬಿದ್ದು ಬಾಲಕ ಸಾವು
ಬಳ್ಳಾರಿ : ಆಟೋದಿಂದ ಆಯಾ ತಪ್ಪಿ ಕೆಳಕ್ಕೆ ಬಿದ್ದು 14 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪ್ರಿಯಾಂಕ ನಗರದ ಶ್ರೀಕಾಂತ ಮೃತ ಬಾಲಕನಾಗಿದ್ದಾನೆ.
ಶ್ರೀಕಾಂತ್ ಮತ್ತು ಆತನ ಅಣ್ಣ ಮಂಜುನಾಥ್ ವ್ಯಾಪಾರ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ ಆಟೋದ ಹಿಂಬದಿ ಕುಳಿತಿದ್ದ ಶ್ರೀಕಾಂತ್ ಆಯಾ ತಪ್ಪಿ ಕಳಕ್ಕೆ ಬಿದ್ದಿದ್ದಾನೆ.
ಈ ವೇಳೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









