Turkey – Syria earthquake : 34 ಸಾವಿರಕ್ಕೇರಿದ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ…
ದುರಂತ ಭೂಕಂಪದ ನಂತರ ಟರ್ಕಿ ಮತ್ತು ಸಿರಿಯಾದಾದ್ಯಂತ ಸಾವಿನ ಸಂಖ್ಯೆ ಕನಿಷ್ಠ 34,179 ತಲುಪಿದೆ. ಟರ್ಕಿಯಲ್ಲಿ ಸಾವಿನ ಸಂಖ್ಯೆ 29,605 ತಲುಪಿದೆ ಎಂದು ಟರ್ಕಿಶ್ ತುರ್ತು ಸಮನ್ವಯ ಕೇಂದ್ರ SAKOM ತಿಳಿಸಿದೆ.
ಸಿರಿಯಾದ ರಾಜ್ಯ ಸುದ್ದಿ ಸಂಸ್ಥೆ SANA ಪ್ರಕಾರ, ಸಿರಿಯಾದಲ್ಲಿ ದೃಢಪಡಿಸಿರುವ ಸಾವಿನ ಸಂಖ್ಯೆ 4,574 ಕ್ಕೆ ತಲುಪಿದೆ. 3160 ಕ್ಕೂ ಹೆಚ್ಚು ಸಾವು ಬಂಡುಕೋರರ ಇರುವ ಭಾಗಗಳಲ್ಲಿ ವರದಿಯಾಗಿದ್ದು, ಸಿರಿಯಾದ ಸರ್ಕಾರಿ ನಿಯಂತ್ರಿತ ಭಾಗಗಳಲ್ಲಿ 1,414 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.
ಭೂಕಂಪಗಳ ಹಿನ್ನೆಲೆಯಲ್ಲಿ ಲೂಟಿಕೋರರು ಸರಕುಗಳನ್ನ ಕದಿಯುತ್ತಿದ್ದಾರೆ. ಇದನ್ನ ತಡೆಯಲು ಟರ್ಕಿಯ ಅಂಟಾಕ್ಯಾ ನಗರದ ಮಧ್ಯ ಜಿಲ್ಲೆಯ ವ್ಯಾಪಾರ ಮಾಲೀಕರು ತಮ್ಮ ಅಂಗಡಿಗಳನ್ನು ಖಾಲಿ ಮಾಡುತ್ತಿದ್ದರು.
Death toll across Turkey , Syria following earthquake reach over 34,000








