ರಾಜ್ಯದ ಈ ಜಿಲ್ಲೆಗಳಲ್ಲಿ ಒಂದಂಕಿಗೆ ಕುಸಿದ ಸೋಂಕು coronavirus
ಬೆಂಗಳೂರು : ದೇಶದಲ್ಲಿ ಕೊರೊನಾ ಎರಡನೇ ಅಲೆ ಶುರುವಾದಾಗ ಕೋವಿಡ್ ಹಾಟ್ ಸ್ಪಾಟ್ ಆಗಿದ್ದ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ರಾಜ್ಯದಲ್ಲಿ ಹೆಮ್ಮಾರಿ ದಿಕ್ಕುದೆಸೆ ಇಲ್ಲದಂತೆ ಅಬ್ಬರಿಸಿದ್ದು, ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಆದ್ರೆ ಇದೀಗ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಒಂದಂಕಿಗೆ ಕುಸಿದಿದೆ.
ಹೌದು..! ಜೂನ್ 28 ರಂದು ಬಿಡುಗಡೆಯಾದ ಕೊರೊನಾ ಬುಲೆಟಿನ್ ಪ್ರಕಾರ ರಾಜ್ಯದ 6 ಜಿಲ್ಲೆಗಳಲ್ಲಿ ಸೋಂಕು ಬಹಳ ಕಡಿಮೆಯಾಗಿದೆ. ಯಾದಗಿರಿ 2, ಬೀದರ್ 3, ಕಲಬುರಗಿ ಮತ್ತು ವಿಜಯಪುರದಲ್ಲಿ ತಲಾ 4, ಬಾಗಲಕೋಟೆ 8, ರಾಯಚೂರಿನಲ್ಲಿ 9 ಮಂದಿಗೆ ಸೋಂಕು ಬಂದಿದೆ.
ಇನ್ನುಳಿದಂತೆ ಬೆಂಗಳೂರು ನಗರ 563, ಮೈಸೂರು 282, ದಕ್ಷಿಣ ಕನ್ನಡ 263, ಶಿವಮೊಗ್ಗ 194, ಕೊಡಗು 150, ಹಾಸನದಲ್ಲಿ 138 ಪ್ರಕರಣ ವರದಿಯಾಗಿದೆ. ಸದ್ಯ ರಾಜ್ಯದಲ್ಲಿನ್ನೂ 97,592 ಸಕ್ರಿಯ ಪ್ರಕರಣಗಳಿವೆ.









