ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆ Saaksha Tv
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 1,61,386 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟ್ವೀಟ್ ಮಾಡಿದೆ.
ದೇಶದಲ್ಲಿ ಕರೊನಾ ಸಕ್ರೀಯ ಪ್ರಕರಣಗಳು 16,21,603 ಲಕ್ಷ. ಇದರ ಪ್ರತಿಶತವು ಶೇ 3.90 ರಷ್ಟಿದೆ. ದಿನದ ಏರಿಕೆಯು ಶೇ 9.26 ಪ್ರತಿಶತದಷ್ಟಿದ್ದು, ವಾರದ ಏರಿಕೆ ಪ್ರಮಾಣವು 14.15 ರಷ್ಟಿದೆ. ಕಳೆದ 24 ಗಂಟೆಯಲ್ಲಿ ಚೇತರಸಿಕೊಂಡವರು 2,81,109 ಲಕ್ಷ ಜನರು. ಇದರ ಪ್ರತಿಶತವು ಶೇ 94.91 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನೂ ಕಳೆದ 24 ಗಂಟೆಯಲ್ಲಿ 1,733 ಜನರು ಸಾವನ್ನಪ್ಪಿದ್ದಾರೆ. ಹಾಗೇ ಕಳೆದ 24 ಗಂಟೆಯಲ್ಲಿ 17,42,793 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ದೇಶದಲ್ಲಿ ಒಟ್ಟು 167.29 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.