Deepak Hooda | ಟೀಂ ಇಂಡಿಯಾಗೆ ಬಿಗ್ ಶಾಕ್.. ಸ್ಟಾರ್ ಆಟಗಾರ ಔಟ್
ಟಿ 20 ವಿಶ್ವಕಪ್ 2022ಗೂ ಮುನ್ನಾ ಟೀಂ ಇಂಡಿಯಾಗೆ ಭಾರಿ ಶಾಕ್ ಎದುರಾಗಿದೆ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ದೀಪಕ್ ಹೂಡಾ ಗಾಯದ ಕಾರಣದಿಂದಾಗಿ ತಂಡದಿಂದ ದೂರವಾಗಿದ್ದಾರೆ.
ದೀಪಕ್ ಚಹಾರ್ ದಕ್ಷಿಣಾಫ್ರಿಕಾ ಸರಣಿ ಸೇರಿದಂತೆ ಟಿ 20 ವಿಶ್ವಕಪ್ ಗೂ ದೂರವಾಗಲಿದ್ದಾರೆ.
ದೀಪಕ್ ಹೂಡಾ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.
ಆಸ್ಟ್ರೆಲಿಯಾ ಟಿ 20 ಸರಣಿಗೆ ದೀಪಕ್ ಹೂಡಾ ಆಯ್ಕೆಯಾಗಿದ್ದರು.

ಬೆನ್ನು ನೋವಿನ ಕಾರಣದಿಂದಾಗಿ ಬೆಂಚ್ ಗೆ ಸೀಮಿತವಾಗಿದ್ದರು.
ಈ ವಿಷಯವನ್ಉನ ಬಿಸಿಸಿಐ ಟ್ವಿಟ್ಟರ್ ನಲ್ಲಿ ತಿಳಿಸಿದೆ.
ಅಂದಹಾಗೆ ದೀಪಕ್ ಹೂಡಾ ಇತ್ತೀಚಿನ ದಿನಗಳಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದಾರೆ.
ಈ ವರ್ಷ ನಡೆದ ಐಪಿಎಲ್ ನಲ್ಲಿ ಅಬ್ಬರಿಸಿದ್ದ ಹೂಡಾ, ಟೀಂ ಇಂಡಿಯಾ ಪರ ಮಿಂಚಿದರು.
ಟಿ 20 ವಿಶ್ವಕಪ್ ಗೂ ದೀಪಕ್ ಹೂಡಾ ಆಯ್ಕೆಯಾಗಿದ್ದಾರೆ.








