ಇಂದಿರಾನಗರದ ಗೂಂಡಾ ಜೊತೆ ಇಂದಿರಾನಗರದ ಗೂಂಡಿ
ಕ್ರಿಕೆಟ್ ವಾಲ್ ಎಂದೇ ಕರೆಯಿಸಿಕೊಳ್ಳುವ ರಾಹುಲ್ ದ್ರಾವಿಡ್ ಹೊಸ ಜಾಹೀರಾತಿನಲ್ಲಿ ‘ಇಂದಿರಾನಗರದ ಗುಂಡಾ’ ಎಂದು ಕರೆಯಿಸಿಕೊಂಡ ನಂತರ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ನಾನು ‘ಇಂದಿರಾನಗರದ ಗೂಂಡಿ’ ಎಂದು ತಮಗೆ ತಾವೇ ಹೆಸರನ್ನಿಟ್ಟುಕೊಂಡಿದ್ದಾರೆ. ರೋಡ್ ರೇಜಿಂಗ್ ಒಳಗೊಂಡ ಜಾಹೀರಾತನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದ್ದು, ಅದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಮಾತ್ರವಲ್ಲ ರಾಹುಲ್ ದ್ರಾವಿಡ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ಕ್ರೆಡಿಟ್ ಕಾರ್ಡ್ ಬಿಲ್ ಪೇ ಮಾಡುವ ಕ್ರೆಡ್ ಕಂಪನಿಯ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ಕಾಣಿಸಿಕೊಂಡಿದ್ದು, ಅವರು ಟ್ರಾಫಿಕ್ನಲ್ಲಿ ಸಿಲುಕಿರುತ್ತಾರೆ. ನಿಜ ಜೀವನದಲ್ಲಿ ಯಾವಾಗಲೂ ಶಾಂತವಾಗಿರುವ ರಾಹುಲ್ ದ್ರಾವಿಡ್ ಸಿಡುಕಿನ ವ್ಯಕ್ತಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಒತ್ತಡಕ್ಕೆ ಒಳಗಾದ ಅವರು ಅಕ್ಕ ಪಕ್ಕದಲ್ಲಿ ನಿಂತಿರುವ ಕಾರು ಚಾಲಕರ ಮೇಲೆ ಸಿಟ್ಟಿಗೆದ್ದಿದ್ದು, ಪಕ್ಕದಲ್ಲಿ ನಿಂತಿರುವ ಕಾರಿನ ಕನ್ನಡಿ ಒಡೆದು ಹಾಕುತ್ತಾರೆ. ಮನಬಂದಂತೆ ಹಾರ್ನ್ ಮಾಡುತ್ತಾ, ಹೊಡೆದು ಬಿಡ್ತೀನಿ ಅಂತ ಬೇರೆಯವರಿಗೆ ಎಚ್ಚರಿಕೆ ಕೊಡುತ್ತಾರೆ. ಕೈಯಲ್ಲಿ ಬ್ಯಾಟ್ ಹಿಡಿದು ಕಾರಿನ ಮೇಲೆ ನಿಂತು ನಾನು ಇಂದಿರಾ ನಗರದ ಗೂಂಡಾ ಎಂದು ಕಿರುಚುತ್ತಾರೆ.
ಇಂದಿರಾನಗರ ಬೆಂಗಳೂರಿನಲ್ಲಿ ಜನಪ್ರಿಯ ಪ್ರದೇಶವಾಗಿದೆ. ಈ ಜಾಹೀರಾತು ಸಾಕಷ್ಟು ವೈರಲ್ ಆಗಿದ್ದು, ಜನರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕ್ರೀಡಾ ತಾರೆಯರು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ರಾಹುಲ್ ದ್ರಾವಿಡ್ ಅವರ ಈ ಸಿಡುಕಿನ ಹೊಸ ಅವತಾರಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಈ ಜಾಹೀರಾತಿಗೆ, ರಾಹುಲ್ ಭಾಯ್ ಅವರ ಈ ಮುಖವನ್ನು ನೋಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ ತನ್ನ ಬಾಲ್ಯದ ಚಿತ್ರವನ್ನು ಹಂಚಿಕೊಂಡಿದ್ದು, ಸ್ವೆಟರ್ ಮತ್ತು ಉಣ್ಣೆಯ ಟೋಪಿಗಳನ್ನು ಕಟ್ಟಿ ನೆಲದ ಮೇಲೆ ಕುಳಿತಿರುವ ಫೋಟೋ ಗೆ ಇಂದಿರಾನಗರದ ಗೂಂಡಿ ನಾನು ಎಂದು ಶೀರ್ಷಿಕೆ ನೀಡಿ ನಗುವಿನ ಎಮೋಜಿಯನ್ನು ಸೇರಿಸಿದ್ದಾರೆ.
ದೀಪಿಕಾ ಬೆಂಗಳೂರಿನಲ್ಲಿ ಬೆಳೆದಿದ್ದು, ತಾಯಿ ಉಜ್ಜಲಾ ಮತ್ತು ಬ್ಯಾಡ್ಮಿಂಟನ್ ಸ್ಟಾರ್ ತಂದೆ ಪ್ರಕಾಶ್ ಪಡುಕೋಣೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ದೀಪಿಕಾ ಪತಿ ರಣವೀರ್ ಸಿಂಗ್ ಜೊತೆ ಮುಂಬೈನಲ್ಲಿದ್ದು ಆಗಾಗ್ಗೆ ತನ್ನ ಹೆತ್ತವರನ್ನು ಭೇಟಿ ಮಾಡುತ್ತಾರೆ.
ಕಿಡ್ನಿ ಸ್ಟೋನ್ ಸಮಸ್ಯೆಗೆ ಬೀಟ್ರೂಟ್ ನ ಮನೆಮದ್ದುhttps://t.co/eee6aOjFG0
— Saaksha TV (@SaakshaTv) April 8, 2021
ಉರಿಬಿಸಿಲಿಗೆ ತಂಪಾದ ಬೂದು ಕುಂಬಳಕಾಯಿ ಜ್ಯೂಸ್https://t.co/trQ50Lcaki
— Saaksha TV (@SaakshaTv) April 8, 2021
ಸ್ಮಾರ್ಟ್‌ಫೋನ್ ಬಳಸುವವರು ವಹಿಸಬೇಕಾದ ಮುನ್ನೆಚ್ಚರಿಕೆಗಳುhttps://t.co/GlDX34UUhx
— Saaksha TV (@SaakshaTv) April 9, 2021
https://twitter.com/SaakshaTv/status/1380567052214132736?s=19
#DeepikaPadukone #Indiranagar #rahuldravid








