ಬಾಲಿವುಡ್ ನಲ್ಲಿ ಡ್ರಗ್ಸ್ ಮಹಾ ಸ್ಪೋಟವಾಗಿದೆ. ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಚಕ್ರವರ್ತಿ ಬಾಲಿವುಡ್ ನ ಅನೇಕರ ಹೆಸರುಗಳನ್ನ NCB ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.
ಇದರ ಬೆನ್ನಟ್ಟಿ ಹೋದ ಮೇಲೆ ಬಾಲಿವುಡ್ ನ ದೊಡ್ಡ ದೊಡ್ಡ ಕುಳಗಳ ಹೆಸರೇ ಕೇಳಿಬರುತ್ತಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
ರಕುಲ್ ಪ್ರೀತ್, ಸಾರಾ ಅಲಿಖಾನ್ ಹೆಸರು ಈ ಹಿಂದೆಯೇ ಕೇಳಿ ಬಂದಿತ್ತು. ಆದರೆ ಇದೀಗ ಈ ಲಿಸ್ಟ್ ಗೆ ಬಾಲಿವುಡ್ ನ ಸ್ಟಾರ್ ನಟಿ ಡಿಂಪಲ್ ಕ್ವೀನ್ ದೀಪಿನಾ ಪಡುಕೋಣೆ ಹಾಗೂ ಮತ್ತೊಬ್ಬ ಖ್ಯಾತ ನಟಿ ಶ್ರದ್ಧಾ ಕಪೂರ್ ಹೆಸರು ಸೇರಿಕೊಂಡಿದೆ.
ಹೌದು ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಗೆ ಎನ್ ಸಿಬಿ ಅಧಿಕಾರಿಗಳು ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಇನ್ನೂ ಸೆ. 25ಕ್ಕೆ ದೀಪಿಕಾ ಪಡುಕೋಣೆಯನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಇತ್ತ ದಕ್ಷಿಣ ಕನ್ನಡ ಹಾಗೂ ಬಾಲಿವುಡ್ ನಲ್ಲಿ ಖ್ಯಾತಿ ಪಡೆದಿರುವ ರಕುಲ್ ಪ್ರೀತ್ ಗೂ NCB ಸಮನ್ಸ್ ಜಾರಿಯಾಗಿದೆ.
ಇತ್ತ ದೀಪಿಕಾಗೆ ಸಮನ್ಸ್ ಜಾರಿಯಾಗ್ತಿದ್ದಂತೆ ತಮ್ಮ ವಕೀಲರನ್ನ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ದೀಪಿಕಾ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಗೂ ನೋಟೀಸ್ ಜಾರಿಯಾಗಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಯಲಿದೆ.
ಇನ್ನೂ ಹಲವು ತಾರೆಯರಿಗೆ ನಶೆ ನಂಟಿರುವ ಮಾಹಿತಿ ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಬಾಲಿವುಡ್ ನ ದೊಡ್ಡ ದೊಡ್ಡ ಕುಳಗಳಿಗೂ NCB ನೋಟೀಸ್ ನೀಡುವ ಸಾಧ್ಯತೆಯಿದೆ.