ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಸದ್ಯ ಜಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕ ಬಿಲ್ಲಾ, ಮಹಾನಟಿ ಸಿನಿಮಾ ಸಾರಥಿ ನಾಗ್ ಅಶ್ವಿನ್ ಸಾರಥ್ಯ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ. ಈ ಸಿನಿಮಾದಲ್ಲಿ ತನ್ನ ಅಭಿನಯದ ಮೂಲಕ ಬಾಲಿವುಡ್ ರಾಣಿಯಾಗಿ ಮೆರೀತಿರೋ ದೀಪಿಕಾ ಪಡುಕೋಣೆ ಪ್ರಭಾಸ್ ಗೆ ಜೋಡಿಯಾಗಿ ನಟಿಸೋ ಮಾತುಗಳು ಕೇಳಿಬರ್ತಿದೆ.
ಅಂದ್ಹಾಗೆ ಬಹುಕೋಟಿ ವೆಚ್ಚದಲ್ಲಿ ಪಂಚ ಭಾಷೆಗಳಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದರಿಂದ ಬಾಲಿವುಡ್ ಟಾಪ್ ನಟಿಯ ಹುಡುಕಾಟದಲ್ಲಿದೆ ಚಿತ್ರತಂಡ. ಅದರ ಭಾಗವಾಗಿ ನಿರ್ದೇಶಕ ನಾಗ್ ಅಶ್ವಿನ್ ದೀಪಿಕಾ ಪಡುಕೋಣೆಗೆ ಕಥೆ ಹೇಳಿದ್ದಾರೆ. ಕಥೆ ಕೇಳಿ ಮೆಚ್ಚಿರೋ ದೀಪಿಕಾ ನಟಿಸೋಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಬಾಹುಬಲಿ ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ ಏರ್ಪಟ್ಟಿದೆ. ಹೀಗಾಗಿಯೇ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಹೆಸರು ಮಾಡಿರೋ ನಟಿಯನ್ನ ಚಿತ್ರತಂಡ ಆಯ್ಕೆ ಮಾಡಿಕೊಳ್ಳುತ್ತಿದೆ. ಇನ್ನು ಈ ಬಿಗ್ ಬಜೆಟ್ ಸಿನಿಮಾವನ್ನು ವೈಜಯಂತಿ ಮೂವೀಸ್ ಬ್ಯಾನರ್ ನಲ್ಲಿ ಅಶ್ವಿನಿ ದತ್ ನಿರ್ಮಾಣ ಮಾಡುತ್ತಿದ್ದಾರೆ.








