ಮುಂಬೈ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಮೊಬೈಲ್ ಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ಪಡೆದುಕೊಂಡಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ನಾಲ್ವರು ನಟಿಯರಿಗೆ ನೋಟಿಸ್ ನೀಡಲಾಗಿತ್ತು.
ವಿಚಾರಣೆಗೆ ಮುನ್ನ ದೀಪಿಕಾ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಸಂಭಾಷಣೆಯ ಮಾಹಿತಿ ಲೀಕ್ ಆಗಿತ್ತು.
ರಕುಲ್ ಪ್ರೀತ್ ಸಿಂಗ್ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು. ಇನ್ನುಳಿದ ಮೂವರು ಶನಿವಾರ ಎನ್ ಸಿಬಿ ವಿಚಾರಣೆ ಎದುರಿಸಿದ್ದಾರೆ.
ಇತ್ತ ವಿಚಾರಣೆಗೆ ಹಾಜರಾಗಿದ್ದ ಕರೀಷ್ಮಾ ಕಪೂರ್, ಜಯಾ ಸಾಹಾ ಮತ್ತು ಸಿಮೋನ್ ಖಂಬಟ್ಟಾರ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್ ಸಿಬಿ ಸ್ಪಷ್ಟಪಡಿಸಿದೆ.
ಇಂದು ವಿಚಾರಣೆಗೆ ಹಾಜರಾಗಿದ್ದ ಧರ್ಮ ಪ್ರೊಡೆಕ್ಷನ್ ಎಕ್ಸ್ ಕ್ಯೂಟಿವ್ ಪ್ರೊಡ್ಯೂಸರ್ ಕ್ಷಿತಿಜ್ ಪ್ರಸಾದ್ ಎಂಬವರನ್ನ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ವಿಚಾರಣೆ ವೇಳೆ ತನಿಖೆ ಸಹಕರಿಸದ ಹಿನ್ನೆಲೆ ಕ್ಷಿತಿಜ್ ಬಂಧನವಾಗಿದೆ.








