ದಕ್ಷಿಣ ಆಫ್ರಿಕಾ: ಪೊಚೆಫ್ಸ್ಟ್ರೋಮ್ ನಲ್ಲಿ ನಡೆದ ಅಂಡರ್-೧೯ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ತಂಡ ವಿಶ್ವಕಪ್ಗೆ ಮುತ್ತಿಕ್ಕಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಯುವ ಆಟಗಾರರು ೪೭.೨ ಓವರ್ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ೧೭೭ ರನ್ ಗಳಿಸಿ ಬಾಂಗ್ಲಾದೇಶಕ್ಕೆ ೧೭೮ ರನ್ ಟಾರ್ಗೆಟ್ ನೀಡಿದ್ದರು. ಭಾರತದ ಪರ ಯಶಸ್ವಿ ಜೈಸ್ವಾಲ್ ೮೮ (೧೨೧) ರನ್ ಗಳಿಸಿದ್ದು ಬಿಟ್ಟರೇ ಮತ್ತಾವುದೇ ಆಟಗಾರರು ೪೦ರ ಗಡಿ ದಾಟಲಿಲ್ಲ. ಕೇವಲ ೨೧ ರನ್ ಗಳಿಗೆ ಕೊನೆಯ ೭ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ೪೭.೨ ಓವರ್ ನಲ್ಲ್ಲೇ ಎಲ್ಲಾ ವಿಕೆಟ್ ಕಳೆದುಕೊಂಡು ೧೭೭ ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ, ಆರಂಭಿಕ ಆಟಗಾರ ಪರ್ವೇಜ್ ಹೊಸೈನ್ ಎಮೋನ್ ಹಾಗೂ ೪೭(೭೯) ಹಾಗೂ ಅಕ್ಬರ್ ಅಲಿ ೪೪ (೭೬) ಬ್ಯಾಟಿಂಗ್ ನೆರವಿನಿಂದ ೪೨.೧ ಓವರ್ನಲ್ಲೇ ಗುರಿ ತಲುಪಿ ಮೊದಲ ಬಾರಿಗೆ ಅಂಡರ್-೧೯ ವಿಶ್ವಕಪ್ ಗೆದ್ದುಕೊಂಡಿತು. ಟೀಂ ಇಂಡಿಯಾ ಪರ ರವಿ ಬಿಶ್ನೋಯ್ ೪ ವಿಕೆಟ್ ಹಾಗೂ ಸುಶಾಂತ್ ಮಿಶ್ರಾ ೨ ವಿಕೆಟ್ ಪಡೆದರು.
ಬಾಂಗ್ಲಾಗೆ ಸಭ್ಯತೆಯಲ್ಲಿ ಸೋಲು!

ಭಾರತದ ವಿರುದ್ಧದ ಫೈನಲ್ ಪಂದ್ಯ ಗೆಲ್ಲೋ ಮೂಲಕ ಬಾಂಗ್ಲಾದೇಶ ಅಂಡರ್-೧೯ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿದೆ. ಆದ್ರೆ ಬಾಂಗ್ಲಾ ಆಟಗಾರರು ಗೇಮ್ ಸ್ಪಿರಿಟ್ ಉಳಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದು, ಸಭ್ಯತೆ ಮೀರಿ ವರ್ತಿಸಿದ್ದಾರೆ. ಬಾಂಗ್ಲಾ ಆಟಗಾರರ ಈ ವರ್ತನೆಗೆ ಕ್ರಿಕೆಟ್ ಲೋಕವೇ ಬೇಸರ ವ್ಯಕ್ತಪಡಿಸ್ತಿದೆ.
ಫೈನಲ್ ಕಾಳಗದಲ್ಲಿ ಆರಂಭದಿAದಲೇ ಅಗ್ರೆಸ್ಸಿವ್ನೆಸ್, ಸ್ಲೆಡ್ಜಿಂಗ್ ಮಿತಿ ಮೀರಿತ್ತು. ಭಾರತದ ಆಟಗಾರರನ್ನು ಪಂದ್ಯದ ಉದ್ದಕ್ಕೂ ಬಾಂಗ್ಲಾ ಆಟಗಾರರು ಕೆಣಕುತ್ತಲೇ ಇದ್ದರು. ಆಗಾಗ ಅಂಪೈರ್ ಗಳು ಬಾಂಗ್ಲಾ ಆಟಗಾರರಿಗೆ ವಾರ್ನ್ ಮಾಡುತ್ತಲೇ ಇದ್ದರು. ಆದರೂ ತಮ್ಮ ಚಾಳಿಯನ್ನು ಮುಂದುವರಿಸುತ್ತಲೇ ಇದ್ದರು.
ಗೆದ್ದ ಮೇಲೂ ನರಿ ಬುದ್ಧಿ ಬಿಡದ ಬಾಂಗ್ಲಾ!

ಫೈನಲ್ ಪಂದ್ಯವನ್ನ ಬಾಂಗ್ಲಾದೇಶ ಗೆದ್ದುಕೊಂಡಾಗ ಎಲ್ಲಾ ಆಟಗಾರರು ಮೈದಾನಕ್ಕೆ ಓಡಿ ಬಂದು ಸಂಭ್ರಮಾಚಾರಣೆ ನಡೆಸಿದ್ರು. ಈ ವೇಳೆ ಬಾಂಗ್ಲಾ ತಂಡದ ಓರ್ವ ಆಟಗಾರ, ಛಂಗನೆ ಹಾರಿ ಟೀಂ ಇಂಡಿಯಾದ ಆಟಗಾರನ ಮುಂದೆ ನಿಂತು, ಅಸಭ್ಯ ವರ್ತನೆ ತೋರ್ಪಡಿಸಿದ್ದ. ಇದು ಟೀಂ ಇಂಡಿಯಾ ಆಟಗಾರನನ್ನು ಕೂಡ ಕೆರಳಿ ಕೆಂಡವನ್ನಾಗಿಸಿತು. ಈ ವೇಳೆ ಉಭಯ ಆಟಗಾರರ ನಡುವೆ ಮಾತಿನ ಸಮರವೂ ನಡೆಯಿತು. ಈ ಘಟನೆ ಕೆಲಕಾಲ ಕ್ರೀಡಾಂಗಣವನ್ನ ರಣರಂಗವನ್ನಾಗಿಸೋ ಭಯವನ್ನಂತೂ ಹುಟ್ಟು ಹಾಕಿತ್ತು.
ಒಟ್ಟಾರೆ ಸ್ಲೆಡ್ಜಿಂಗ್ ಭೂತ ಪಂದ್ಯದ ಸ್ಪಿರಿಟ್ ಅನ್ನು ಹಾಳುಮಾಡಿದ್ದು, ಜಂಟಲ್ ಮ್ಯಾನ್ ಗೇಮ್ನ ವಿಪರ್ಯಾಸವೇ ಸರಿ.








