ಏನಿರಬಹುದು…. 10 ಘಂಟೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ…!
ಆಗಸ್ಟ್ 9- ಭಾನುವಾರ.. ಕೇಂದ್ರ ಸರ್ಕಾರದಿಂದ ಬೆಳಗ್ಗೆ ಹತ್ತು ಘಂಟೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆಯೊಂದು ಹೊರಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ ನಾಥ್ ಸಿಂಗ್ ಹೇಳಿದ್ದಾರೆ. ತನ್ನ ಟ್ವಿಟರ್ ನಲ್ಲಿ ಬರೆದುಕೊಂಡಿರುವ ರಾಜನಾಥ್ ಸಿಂಗ್ ದೇಶ ವಾಸಿಗಳಲ್ಲಿ ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.
ರಾಜನಾಥ್ ಸಿಂಗ್ ಟ್ವಿಟರ್ ಮಾಡಿರುವುದರಿಂದ ಇದು ರಕ್ಷಣಾ ಇಲಾಖೆಗೆ ಸಂಬಂಧ ಪಟ್ಟಂತಹ ಘೋಷಣೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ದೇಶದಲ್ಲಿ ಹಲವಾರು ಸಂಕಷ್ಟಗಳು ಉಂಟಾಗಿವೆ. ಕೊರೋನಾ ಸೋಂಕು ಮತ್ತೊಂದೆಡೆ ಪ್ರಕೃತಿಯ ಮುನಿಸಿನಿಂದ ಪ್ರವಾಹ ಹಾಗೂ ಗಡಿ ಸಮಸ್ಯೆ, ಉಗ್ರರ ಕರಿನೆರಳು,ಚೀನಾ ಸಂಘರ್ಷ ಹೀಗೆ ಹಲವಾರು ವಿಚಾರಗಳಿವೆ. ಆದ್ರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟ್ ಮಾಡಿರುವುದರಿಂದ ಇದು ಸೇನೆ ಮತ್ತು ದೇಶದ ರಕ್ಷಣೆಯ ಬಗ್ಗೆ ಮಾಹಿತಿ ನೀಡುವಂತಹ ಘೋಷಣೆಯಾಗಿರಬಹುದು.
ಒಟ್ಟಿನಲ್ಲಿ ರಾಜನಾಥ್ ಸಿಂಗ್ ಟ್ವಿಟ್ ಮಾಡಿ ಇಡೀ ದೇಶದ ಜನರನ್ನು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.