Defense Expo-22 : ಮೇಕ್ ಇನ್ ಇಂಡಿಯಾ ಯಶಸ್ಸಿನ ಕಥೆಯಾಗುತ್ತಿದೆ – ಪ್ರಧಾನಿ ಮೋದಿ..
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ-22 ಅನ್ನು ಉದ್ಘಾಟಿಸಿದರು. ಉತ್ತರ ಗುಜರಾತ್ ನ ದೀಸಾದಲ್ಲಿ ವಾಯುಪಡೆಯ 52 ನೇ ವಿಂಗ್‌ನ ಹೊಸ ವಾಯುನೆಲೆಗೆ ಅಡಿಪಾಯ ಹಾಕಿದ ನಂತರ ಮಾತನಾಡಿದ ಪ್ರಧಾನಿ “ಭಾರತದ ಕಂಪನಿಗಳು ಮಾತ್ರ ಭಾಗವಹಿಸುತ್ತಿರುವ ಇದು ದೇಶದಲ್ಲಿ ಮೊದಲ ಡಿಫೆನ್ಸ್ ಎಕ್ಸ್‌ಪೋ” ಎಂದು ಪ್ರಧಾನಿ ಹೇಳಿದರು. ಮೇಡ್ ಇನ್ ಇಂಡಿಯಾ ರಕ್ಷಣಾ ಸಾಧನಗಳನ್ನು ಎಕ್ಸಪೋ ದಲ್ಲಿ ಕಾಣಬಹುದು.
ಡಿಫೆನ್ಸ್ ಎಕ್ಸ್‌ಪೋ-22 ರ 12 ನೇ ಆವೃತ್ತಿಯ ಸಂದರ್ಭದಲ್ಲಿ, ರಕ್ಷಣಾ ಪಡೆಗಳು 101 ವಸ್ತುಗಳ ಆಮದುಗಳನ್ನ ನಿಷೇಧಿಸುವ ಪಟ್ಟಿಯನ್ನ ಬಿಡುಗಡೆ ಮಾಡಲಿದೆ ಎಂದು ಮೋದಿ ಹೇಳಿದರು. ಇವುಗಳೊಂದಿಗೆ 411 ರಕ್ಷಣಾ ಸಾಮಗ್ರಿಗಳನ್ನ ಸ್ಥಳೀಯ ಮಟ್ಟದಲ್ಲಿ ಮಾತ್ರ ಖರೀದಿಸಬಹುದು.
ರಕ್ಷಣಾ ವಿಭಾಗದ ರಫ್ತು 8 ಪಟ್ಟು ಹೆಚ್ಚಾಗಿದೆ
ರಕ್ಷಣಾ ವಲಯದ ರಫ್ತು ಮತ್ತು ಹೆಚ್ಚುತ್ತಿರುವ ಜನಪ್ರಿಯತೆಗೆ ಸಂಬಂಧಿಸಿದ ಸಂಗತಿಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ರಕ್ಷಣಾ ವಲಯದ ಯಶಸ್ಸಿನ ಕಥೆಯಾಗುತ್ತಿದೆ ಎಂದು ಅವರು ಹೇಳಿದರು. ಕಳೆದ 8 ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು 8 ಪಟ್ಟು ಹೆಚ್ಚಾಗಿದೆ. 2021-2022ರಲ್ಲಿ ಭಾರತದ ರಕ್ಷಣಾ ರಫ್ತು ಸುಮಾರು 13,000 ಕೋಟಿ ರೂ.ಗಳಷ್ಟಿದ್ದು, ಮುಂಬರುವ ದಿನಗಳಲ್ಲಿ ಅದನ್ನು 40,000 ಕೋಟಿ ರೂ.ಗೆ ತಲುಪುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತದಿಂದ ವಿಶ್ವದ ನಿರೀಕ್ಷೆಗಳು ಹೆಚ್ಚಿವೆ – ಪ್ರಧಾನಿ
ಭಾರತದಿಂದ ವಿಶ್ವದ ನಿರೀಕ್ಷೆಗಳು ಹೆಚ್ಚಿವೆ. ಮತ್ತು ಈ ನಿರೀಕ್ಷೆಗಳನ್ನು ಪೂರೈಸಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡುವುದನ್ನು ಮುಂದುವರಿಸುತ್ತದೆ. ಈ ಡಿಫೆನ್ಸ್ ಎಕ್ಸ್‌ಪೋ ಭಾರತದ ಬಗೆಗಿನ ಜಾಗತಿಕ ನಂಬಿಕೆಯ ಸಂಕೇತವಾಗಿದೆ ಎಂದು ಪ್ರಧಾನಿ ಮಾತನಾಡಿದ್ದಾರೆ.
Defense Expo-22: Make in India is becoming a success story – PM Modi..








