ವಿಕ್ಟರಿ ಪೆರೇಡ್‌ನಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೋಗೆ ಭೇಟಿ
ಹೊಸದಿಲ್ಲಿ, ಜೂನ್ 21: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡನೇ ಮಹಾಯುದ್ಧದಲ್ಲಿನ ವಿಜಯೋತ್ಸವದ 75 ನೇ ವರ್ಷಾಚರಣೆಯ ವಿಕ್ಟರಿ ಪೆರೇಡ್‌ನಲ್ಲಿ ಪಾಲ್ಗೊಳ್ಳಲು ಜೂನ್ 24, 2020 ರಂದು ಮಾಸ್ಕೋಗೆ ಭೇಟಿ ನೀಡಲಿದ್ದಾರೆ.
ರಷ್ಯಾದ ಮತ್ತು ಇತರ ಸ್ನೇಹಪರ ಜನರು ಮಾಡಿದ ವೀರತೆ ಮತ್ತು ತ್ಯಾಗಗಳನ್ನು ಗೌರವಿಸಲು ಪೆರೇಡ್ ಆಯೋಜಿಸಲಾಗಿದ್ದು, ರಾಜನಾಥ್ ಸಿಂಗ್ ಅವರನ್ನು ರಷ್ಯಾ ಒಕ್ಕೂಟದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರು ವಿಕ್ಟರಿ ಪೆರೇಡ್‌ಗೆ ಆಹ್ವಾನಿಸಿದ್ದಾರೆ. ವಿಕ್ಟರಿ ಪೆರೇಡ್ ಅನ್ನು ಈ ಮೊದಲು ಮೇ 9 ಕ್ಕೆ ನಿಗದಿಪಡಿಸಲಾಗಿದ್ದು, ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ವಿಕ್ಟರಿ ಪೆರೇಡ್‌ನಲ್ಲಿ ಭಾಗವಹಿಸಲು ಟ್ರೈ-ಸರ್ವಿಸ್ 75- ಸದಸ್ಯ ಇಂಡಿಯನ್ ಮಿಲಿಟರಿ ಕಂಟಿಜೆಂಟ್ ಈಗಾಗಲೇ ಮಾಸ್ಕೋ ತಲುಪಿದೆ.

ವಿಕ್ಟರಿ ಡೇ ಪೆರೇಡ್‌ನಲ್ಲಿ ಭಾಗವಹಿಸುವ ಮೆರವಣಿಗೆಯ ನೇತೃತ್ವವನ್ನು ಧೀರ ಸಿಖ್ ಲೈಟ್ ಕಾಲಾಳುಪಡೆ ರೆಜಿಮೆಂಟ್‌ನ ಪ್ರಮುಖ ಶ್ರೇಣಿಯ ಅಧಿಕಾರಿ ವಹಿಸಿದ್ದಾರೆ. ವಿಕ್ಟರಿ ಡೇ ಪೆರೇಡ್‌ನಲ್ಲಿ ಭಾರತೀಯ ಭಾಗವಹಿಸುವಿಕೆಯು ಎರಡನೇ ಮಹಾಯುದ್ಧದಲ್ಲಿ ರಷ್ಯಾ ಮತ್ತು ಇತರ ರಾಷ್ಟ್ರಗಳು ಮಾಡಿದ ಮಹತ್ತರ ತ್ಯಾಗಕ್ಕೆ ಗೌರವದ ಸಂಕೇತವಾಗಿದ್ದು, ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನಿಕರು ಸಹ ಭಾಗವಹಿಸಿದ್ದರು.

ರಾಜನಾಥ್ ಸಿಂಗ್ ಅವರಿಗೆ ಭಾರತದ ರಷ್ಯಾ ರಾಯಭಾರಿ ನಿಕೋಲಾಯ್ ಕುಡಾಶೇವ್ ಅವರು ಸುರಕ್ಷಿತ ಪ್ರಯಾಣವನ್ನು ಹಾರೈಸಿದ್ದಾರೆ. ಕುಡಶೇವ್ ತಮ್ಮ ಟ್ವಿಟರ್ ನಲ್ಲಿ ಜೂನ್ 24 ರಂದು ನಡೆಯಲಿರುವ ಗ್ರೇಟ್ # ವಿಕ್ಟರಿ ಡೇ ಮಿಲಿಟರಿ ಪೆರೇಡ್ ಗೆ ಸಾಕ್ಷಿ ಯಾಗಲು ಮಾಸ್ಕೋಗೆ ಸೋಮವಾರ ಪ್ರಯಾಣ ಬೆಳೆಸಲಿರುವ ಕಾರ್ಯತಂತ್ರದ ಪಾಲುದಾರ ಭಾರತದ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರಿಗೆ ಸುರಕ್ಷಿತ ಪ್ರಯಾಣವನ್ನು ಬಯಸುತ್ತೇನೆ ಎಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.








