ADVERTISEMENT
Saturday, April 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

8 ತಿಂಗಳ ನಂತ್ರ ಇಂದಿನಿಂದ ಡಿಗ್ರಿ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ರೀ ಓಪನ್..!

Kariyappa N by Kariyappa N
November 17, 2020
in Newsbeat, Samagra karnataka, ರಾಜ್ಯ
colleges
Share on FacebookShare on TwitterShare on WhatsappShare on Telegram

ಬೆಂಗಳೂರು: ಹೆಮ್ಮಾರಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಆಗಿದ್ದ ಪದವಿ ಹಂತದ ಕಾಲೇಜುಗಳು ರಾಜ್ಯಾದ್ಯಂತ ಇಂದಿನಿಂದ ರೀಓಪನ್ ಆಗಲಿವೆ.
ಡಿಗ್ರಿ ಕೋರ್ಸುಗಳಾದ ಬಿಎ, ಬಿಕಾಂ, ಬಿಎಸ್‍ಸಿ, ಸ್ನಾತಕೋತ್ತರ ಪದವಿ ತರಗತಿಗಳು, ಡಿಪ್ಲೋಮಾ ಹಾಗೂ ಎಂಜಿನಿಯರಿಂಗ್ ಕೋರ್ಸ್‍ಗಳ ತರಗತಿಗಳು  ಆರಂಭವಾಗಲಿವೆ.
ಮೊದಲು ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳು ಆರಂಭವಾಗಲಿವೆ.
ಪದವಿ ತರಗತಿಗಳನ್ನು ಪುನಾರಂಭಿಸಲು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲೂ ಕಳೆದ ಒಂದು ವಾರದಿಂದ ಸಿದ್ಧತೆ ನಡೆದಿದೆ. ಕಾಲೇಜಿನ ಕೊಠಡಿಗಳನ್ನು ಶುಚಿತ್ವಗೊಳಿಸಿ, ಸ್ಯಾನಿಟೈಸ್ ಮಾಡಿ ತಯಾರಿ ಮಾಡಲಾಗಿದೆ.

8 ತಿಂಗಳ ಬಳಿಕ ಡಿಗ್ರಿ ಹಾಗೂ ಸ್ನಾತಕೋತ್ತರ, ಇಂಜಿನಿಯರಿಂಗ್ ಕಾಲೇಜುಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಬರುವಂತೆ ಒತ್ತಡ ಹೇರುವಂತಿಲ್ಲ. ಹಾಜರಾತಿ ಕಡ್ಡಾಯ ಮಾಡುವಂತಿಲ್ಲ.
ಪೋಷಕರ ಅನುಮತಿ ಪತ್ರವನ್ನು ವಿದ್ಯಾರ್ಥಿಗಳು ತರವುದು ಕಡ್ಡಾಯ. ಜತೆಗೆ ಕಾಲೇಜಿಗೆ ಬರುವ 3 ದಿನ ಮೊದಲು ಕೊರೊನಾ ಟೆಸ್ಟ್ ಮಾಡಿಕೊಂಡು ರಿಪೋರ್ಟ್ ತರುವುದು ಕಡ್ಡಾಯ ಮಾಡಲಾಗಿದೆ.
ಕಾಲೇಜುಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಕೊರೊನಾ ಟೆಸ್ಟ್ ರಿಪೋರ್ಟ್‍ನ್ನು ಕಾಲೇಜಿನಲ್ಲಿ ತೋರಿಸಬೇಕು. ಆಯಾ ಕಾಲೇಜುಗಳ ಕ್ಯಾಂಪಸ್‍ಗೆ ವಿದ್ಯಾರ್ಥಿಗಳು ಬರುತ್ತಿದ್ದಂತೆ ಥರ್ಮಲ್ ಚೆಕ್ ಮಾಡಿ, ಮಸ್ಕ್ ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳುವುದು ಕಾಲೇಜುಗಳ ಜವಾಬ್ದಾರಿಯಾಗಿದೆ. ಸದ್ಯಕ್ಕೆ ಕ್ಯಾಂಟೀನ್, ಗ್ರಂಥಾಲಯಗಳನ್ನು ತೆರೆಯುವಂತಿಲ್ಲ. ಪ್ರತಿದಿನ ಕೊಠಡಿ, ಕ್ಯಾಂಪಸ್ ಸ್ಯಾನಿಟೈಸ್ ಆಗಬೇಕು. ಆಫ್‍ಲೈನ್ ತರಗತಿಗೆ ಬರಲು ಆಗದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕವೂ ತರಗತಿ ಆರಂಭಿಸಬಹುದು. ಒಂದು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೆ ಪಾಳಿ ಮಾದರಿಯಲ್ಲಿ ತರಗತಿಗಳನ್ನು ನಡೆಸಬೇಕು.

Related posts

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

April 4, 2026
ದೇವೇಗೌಡರು ನಮ್ಮನ್ನು ವಸೂಲಿಗೆ ತಂದಿಲ್ಲ ಜನರ ಸೇವೆಗೆ ತಂದಿದ್ದಾರೆ : ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗಿಳಿದ ಸಿಎಂ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ; ಹೆಚ್ ಡಿಕೆ ವಾಗ್ದಾಳಿ

ದೇವೇಗೌಡರು ನಮ್ಮನ್ನು ವಸೂಲಿಗೆ ತಂದಿಲ್ಲ ಜನರ ಸೇವೆಗೆ ತಂದಿದ್ದಾರೆ : ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗಿಳಿದ ಸಿಎಂ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ; ಹೆಚ್ ಡಿಕೆ ವಾಗ್ದಾಳಿ

April 4, 2026

ವಿದ್ಯಾರ್ಥಿಗಳು ಮನೆಯಿಂದಲೇ ಊಟ-ತಿಂಡಿ, ನೀರಿನ ಬಾಟಲ್ ತರಬೇಕು. ಜತೆಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಹಾಸ್ಟೆಲ್‍ಗಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ತಮ್ಮ ಮೊಬೈಲ್‍ಗಳಲ್ಲಿ ಆರೋಗ್ಯ ಸೇತು ಆಪ್ ಕಡ್ಡಾಯವಾಗಿ ಡೌನ್‍ಲೋಡ್ ಮಾಡಿಕೊಂಡಿರಬೇಕು. ಕಾಲೇಜುಗಳಿಗೆ ಹೊರಗಡೆಯಿಂದ ಬರುವ ಪೋಷಕರು, ಸಂದರ್ಶಕರ ಪ್ರವೇಶ ಅವಕಾಶ ನೀಡುವಂತಿಲ್ಲ.
ಕೊರೊನಾ ಆತಂಕದ ನಡುವೆಯೂ ಪದವಿ ಕಾಲೇಜುಗಳು ಆರಂಭವಾಗುತ್ತಿದ್ದು, ಈ ಕಾಲೇಜುಗಳ ಸ್ಥಿತಿಗತಿ ನೋಡಿಕೊಂಡು ಮುಂದಿನ ಹಂತದಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯಲು ಮುಂದಾಗುವ ಸಾಧ್ಯತೆ ಇದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: corona guidlinesdegree collegesengeneering collegekartnatakaMedical collegesreopen
ShareTweetSendShare
Join us on:

Related Posts

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

by Shwetha
April 4, 2026
0

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಕಾವೇರುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಪ್ರಚಾರ ಕಣದಿಂದ ಅಂತರ ಕಾಯ್ದುಕೊಂಡಿದ್ದ...

ದೇವೇಗೌಡರು ನಮ್ಮನ್ನು ವಸೂಲಿಗೆ ತಂದಿಲ್ಲ ಜನರ ಸೇವೆಗೆ ತಂದಿದ್ದಾರೆ : ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗಿಳಿದ ಸಿಎಂ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ; ಹೆಚ್ ಡಿಕೆ ವಾಗ್ದಾಳಿ

ದೇವೇಗೌಡರು ನಮ್ಮನ್ನು ವಸೂಲಿಗೆ ತಂದಿಲ್ಲ ಜನರ ಸೇವೆಗೆ ತಂದಿದ್ದಾರೆ : ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗಿಳಿದ ಸಿಎಂ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ; ಹೆಚ್ ಡಿಕೆ ವಾಗ್ದಾಳಿ

by Shwetha
April 4, 2026
0

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ, ಭ್ರಷ್ಟಾಚಾರದ ಆರೋಪಗಳ ನಡುವೆಯೇ ಇದೀಗ ಕುಟುಂಬ ರಾಜಕಾರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣದ ಟೀಕೆ...

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

by Shwetha
April 4, 2026
0

ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದ್ದ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶವನ್ನು ರಾಜ್ಯ ಸರ್ಕಾರ ಅಂತಿಮವಾಗಿ...

ಪಾಠ ಪರೀಕ್ಷೆ ಮೌಲ್ಯಮಾಪನದ ಬೆನ್ನಲ್ಲೇ ಶಿಕ್ಷಕರಿಗೆ ಜನಗಣತಿ ಕಂಟಕ ಬೇಸಿಗೆ ರಜೆಯೂ ಇಲ್ಲದೆ ಹೈರಾಣಾದ ಶಿಕ್ಷಕ ವರ್ಗದಿಂದ ತೀವ್ರ ಆಕ್ರೋಶ

ಪಾಠ ಪರೀಕ್ಷೆ ಮೌಲ್ಯಮಾಪನದ ಬೆನ್ನಲ್ಲೇ ಶಿಕ್ಷಕರಿಗೆ ಜನಗಣತಿ ಕಂಟಕ ಬೇಸಿಗೆ ರಜೆಯೂ ಇಲ್ಲದೆ ಹೈರಾಣಾದ ಶಿಕ್ಷಕ ವರ್ಗದಿಂದ ತೀವ್ರ ಆಕ್ರೋಶ

by Shwetha
April 4, 2026
0

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸದ್ಯ ಬಿಡುವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಪೂರ್ತಿ ಪಾಠ, ಪ್ರವಚನ, ಬಿಸಿಯೂಟ ನಿರ್ವಹಣೆ ಸೇರಿದಂತೆ ನಾನಾ ಜವಾಬ್ದಾರಿಗಳನ್ನು ಹೊತ್ತು ಸುಸ್ತಾಗಿರುವ ಶಿಕ್ಷಕರಿಗೆ ಈಗ...

ಗ್ಯಾರಂಟಿ ನೆಪದಲ್ಲಿ ಜನರ ಜೇಬಿಗೆ ಕತ್ತರಿ : ಪುರುಷರಿಗೂ ಗ್ಯಾರಂಟಿ ಘೋಷಿಸಿದ ಯತ್ನಾಳ್ ನಾನು ಸಿಎಂ ಆದ್ರೆ ಗಂಡಸರಿಗೆ 2000 ಹೆಂಗಸರಿಗೆ 3000 ಫಿಕ್ಸ್

ಗ್ಯಾರಂಟಿ ನೆಪದಲ್ಲಿ ಜನರ ಜೇಬಿಗೆ ಕತ್ತರಿ : ಪುರುಷರಿಗೂ ಗ್ಯಾರಂಟಿ ಘೋಷಿಸಿದ ಯತ್ನಾಳ್ ನಾನು ಸಿಎಂ ಆದ್ರೆ ಗಂಡಸರಿಗೆ 2000 ಹೆಂಗಸರಿಗೆ 3000 ಫಿಕ್ಸ್

by Shwetha
April 4, 2026
0

ಬಾಗಲಕೋಟೆ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram