2022ರ ಮೇ ವರೆಗೂ ಉಚಿತರ ಪಡಿತರ ವಿತರಣೆಗೆ ದೆಹಲಿ ಸರ್ಕಾರ ನಿರ್ಧಾರ..!
ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಸರ್ಕಾರ ಉತ್ತಮ ಯೋಜನೆಗಳೊಂದಿಗೆ ಅಲ್ಲಿನ ಜನರಿಗೆ ಸಾಕಷ್ಟು ಪ್ರಯೋಜನ ಮಾಡಿಕೊಡುವ ಜೊತೆಗೆ ಅನೇಕ ಪರಿಣಾಮಕಾರಿ ಕ್ರಮಗಳನ್ನ ತೆಗೆದುಕೊಳ್ಳುತ್ತಾ ದೇಶದ ಗಮನ ಸೆಳೆಯುತ್ತಿದೆ. ಇದೀಗ ಅಲ್ಲಿನ ಸರ್ಕಾರ (ಆಮ್ ಆದ್ಮಿ ಪಾರ್ಟಿ / AAP) ಜನರಿಗೆ ಉಚಿತ ಪಡಿತರ ಯೋಜನೆಯನ್ನು ಮೇ 2022 ರವರೆಗೆ ಅಂದ್ರೆ ಇನ್ನೂ 6 ತಿಂಗಳುಗಳ ಕಾಲ ವಿಸ್ತರಿಸಲು ನಿರ್ಧರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ. ಕೋವಿಡ್-19 ನಿಂದ ಅನೇಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಹಣದುಬ್ಬರ ಉತ್ತುಂಗಕ್ಕೇರಿದೆ. ಪ್ರಧಾನಿಯವರೇ, ದಯವಿಟ್ಟು ಬಡವರಿಗೆ ಉಚಿತ ಪಡಿತರ ಸರಬರಾಜು ಮಾಡುವ ಯೋಜನೆಯನ್ನು ಆರು ತಿಂಗಳವರೆಗೆ ವಿಸ್ತರಿಸಿ. ದೆಹಲಿ ಸರ್ಕಾರವು ತನ್ನ ಉಚಿತ ಪಡಿತರ ಯೋಜನೆಯನ್ನು ಮುಂದಿನ ಆರು ತಿಂಗಳವರೆಗೆ ವಿಸ್ತರಿಸುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ಉಚಿತ ಪಡಿತರ ವಿತರಣೆಯನ್ನು ನವೆಂಬರ್ 30ರ ನಂತರ ವಿಸ್ತರಿಸುವ ಯಾವುದೇ ಪ್ರಸ್ತಾವನೆಯನ್ನು ಕೇಂದ್ರವು ಹೊಂದಿಲ್ಲ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ ಒಂದು ದಿನದ ನಂತರ ಕೇಜ್ರಿವಾಲ್ ಅವರು ಈ ಟ್ವೀಟ್ ಮಾಡಿದ್ದಾರೆ.