dehli
ಚಳಿಗೆ ತತ್ತರಿಸಿದ ರಾಷ್ಟ್ರ ರಾಜಧಾನಿ : 17 ವರ್ಷಗಳ ಬಳಿಕ ಮತ್ತೆ ದಾಖಲೆ ಮೀರಿದ ಚಳಿ
ರಾಷ್ಟ್ರರಾಜಧಾನಿ ದೆಹಲಿ ಜನರು ಒಂದೆಡೆ ವಾಯುಮಾಲಿನ್ಯದಿಂದ ಬೇಸತ್ತು ಹೋಗಿದ್ರೆ ಮತ್ತೊಂದೆಡೆ ಚಳಿಗೆ ಗಢ ಗಢ ಒದ್ದಾಡುವಂತಾಗಿದೆ. ಅದ್ರಲ್ಲೂ ಈ ಬಾರಿ ಚಳಿಯ ಪ್ರಮಾಣ ದಾಕಲೆಮಟ್ಟ ಮೀರಿದ್ದು, ದಿಲ್ಲಿ ಜನರು ಕೊರೆಯುವ ಚಳಿಯಿಂದಾಗಿ ಹೈರಾಣಾಗಿದ್ದಾರೆ. ಕನಿಷ್ಠ ತಾಪಮಾನ 6.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಳೆದ 17 ವರ್ಷಗಳ ಬಳಿಕ ನವೆಂಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ.
ಮಾಜಿ ಸಿಎಂ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಚಿಂತಾಜನಕ!
ಕಳೆದ ಬಾರಿ 2003ರ ನವೆಂಬರ್ ತಿಂಗಳಲ್ಲಿ ದಾಖಲಾಗಿತ್ತು. ಆದರೆ 17 ವರ್ಷಗಳಲ್ಲಿ ಮತ್ತೆ ಕೊರೆಯುವ ಚಳಿ ದಾಖಲಾಗಿದೆ. ಇದು ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತಲೂ 5 ಅಂಶಗಳಷ್ಟು ಕಡಿಮೆ ಆಗಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.ಇನ್ನು ಈವರೆಗೆ ದೆಹಲಿಯಲ್ಲಿ ನವೆಂಬರ್ ತಿಂಗಳ ಅತ್ಯಂತ ಕಡಿಮೆ ತಾಪಮಾನದ ಸಾರ್ವಕಾಲಿಕ ದಾಖಲೆ ಅಂದ್ರೆ, ಅದು 1938ನೇ ಇಸವಿಯದ್ದು. ಆ ವರ್ಷ ನವೆಂಬರ್ 28ರಂದು ದೆಹಲಿಯಲ್ಲಿ ದಾಖಲಾದ ಕನಿಷ್ಠ ತಾಪಮಾನ 3.9 ಡಿಗ್ರಿ ಸೆಲ್ಶಿಯಸ್. ನಗರದ ಪ್ರಾತಿನಿಧಿಕ ದತ್ತಾಂಶಗಳನ್ನು ಒದಗಿಸುವ ಸಫ್ದರಜಂಗ್ ವೀಕ್ಷಣಾಲಯವು ಕನಿಷ್ಠ 6.3 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ, ಇದು ನವೆಂಬರ್ 2003ರ ನಂತರ ದೆಹಲಿಯಲ್ಲಿ ಕನಿಷ್ಠ ತಾಪಮಾನವಾಗಿದ್ದು, ನಗರದಲ್ಲಿ ಕನಿಷ್ಠ 6.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿಯ ಪ್ರಾದೇಶಿಕ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.
dehli
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








