ರಣಾಂಗಣವಾಯ್ತು ರಾಷ್ಟ್ರ ರಾಜದಾನಿ : ಕೆಂಪುಕೋಟೆ ಪ್ರವೇಶಿಸಿ ಧ್ವಜ ಹಾರಿಸಿದ ರೈತರು : video
ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ರೈತರು ಪೊಲೀಸರ ನಡುವೆ ಸಂಘರ್ಷ ನಡೆದಿದೆ. ಪರಸ್ಪರ ಹೊಡೆದಾಟವೂ ನಡೆದಿದ್ದು ರಾಷ್ಟ್ರ ರಾಜದಾನಿ ದೆಹಲಿ ಅಕಕ್ಷರಸಹ ರಣಾಂಗಣವಾಗಿ ಬದಲಾಗಿ ಹೋಗಿದೆ.
ಅನ್ನದಾತರ ಟ್ರ್ಯಾಕ್ಟರ್ ರ್ಯಾಲಿ ತಡೆಯಲು ನಗರದ ಪ್ರಮುಖ ದಿಕ್ಕುಗಳಲ್ಲಿ ‘ಖಾಕಿ ಚಕ್ರವ್ಯೂಹ’
ಈ ನಡುವೆ ಟ್ರ್ಯಾಕ್ಟರ್ ರ್ಯಾಲಿಗೆ ಪೊಲೀಸರು ನಿಗದಿಪಡಿಸಿದ್ದ ಮಾರ್ಗವನ್ನು ಬದಲಿಸಿ, ಟ್ರ್ಯಾಕ್ಟರ್ ಗಳೊಂದಿಗೆ ಗುಂಪೊಂದು ಕೆಂಪು ಕೋಟೆ ಅವರಣವನ್ನು ಪ್ರವೇಶಿಸಿದ್ದಾರೆ. ಈ ವೇಳೆ ಕೆಲ ರೈತರು ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವದ ವೇಳೆ ಪ್ರಧಾನಿಯವರು ಭಾರತದ ತ್ರಿವರ್ಣ ಧ್ವಜ ಹಾರಿಸುವ ಜಾಗದಲ್ಲಿ ತಮ್ಮ ಧ್ವಜವನ್ನು ಹಾರಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಜ್ಪತ್ನಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆ ನಂತರ, ನಿಗದಿತ ದಾರಿಯಲ್ಲೇ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಪೊಲೀಸರು ರೈತ ಸಂಘಟನೆಗಳಿಗೆ ಅನುಮತಿ ನೀಡಿದ್ದರು.
ಪೊಲೀಸರನ್ನೇ ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು : VIDEO
ಆದರೆ, ಒಂದು ಗುಂಪಿನ ರೈತರು ನಿಗದಿಪಡಿಸಿದ ದಾರಿಯನ್ನು ಬಿಟ್ಟು, ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ನೀಡಿದ್ದ ಸಮಯಕ್ಕಿಂತ ಮುಂಚೆಯೇ, ಮಧ್ಯ ದೆಹಲಿಯತ್ತ ನುಗ್ಗಿದರು. ಗಣರಾಜ್ಯೋತ್ಸವ ನಡೆಯುವ ವೇಳೆಯಲ್ಲೇ ಟ್ರ್ಯಾಕ್ಟರ್ ಗಳ ಮೂಲಕ ದೆಹಲಿ ಪ್ರವೇಶಿಸಿದರು. ಪೊಲೀಸರು ನಿಗದಿಪಡಿಸಿದ ದಾರಿಯನ್ನು ಬಿಟ್ಟು ಬೇರೆ ಮಾರ್ಗ ದಲ್ಲಿ ದೆಹಲಿ ಪ್ರವೇಶಿಸಲು ಪ್ರಯತ್ನಿಸಿದರು.
ನಮ್ಮ ಪ್ರತಿಭಟನೆ ವೇಳೆ ನಡೆದ ಗಲಭೆಗೂ ನಮಗೂ ಸಂಬಂಧವಿಲ್ಲ: ಭಾರತೀಯ ಕಿಸಾನ್ ಸಂಘ..!
ಈ ಸಂದರ್ಭದಲ್ಲಿ ದೆಹಲಿಯ ಕೆಲವೆಡೆ ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರು ರಸ್ತೆಯಲ್ಲಿ ಬ್ಯಾರಿಕೇಡ್, ಕಂಟೇನರ್ ಅಡ್ಡ ಇಟ್ಟರು. ಅವೆಲ್ಲವನ್ನು ಧ್ವಂಸ ಮಾಡಿದ ರೈತರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು. ಪರಿಸ್ಥಿತಿ ಕೈ ಮೀರುವುದನ್ನು ಗಮನಿಸಿದ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದರು. ಅಶ್ರವಾಯು ಪ್ರಯೋಗಿಸಿದರು. ಒಟ್ಟಾರೆ ಕಳೆದ 63 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇದೀಗ ಉಗ್ರಸ್ವರೂಪವೇ ತಾಳಿದ್ದು, ಪರಿಸ್ಥಿತಿ ಮಿತಿ ಮೀರಿ ಹೋಗಿದ್ದು, ರೈತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
#WATCH Protestors enter Red Fort in Delhi, wave flags from the ramparts of the fort pic.twitter.com/4dgvG1iHZo
— ANI (@ANI) January 26, 2021
ದಿಲ್ಲಿ ಟ್ರ್ಯಾಕ್ಟರ್ ದಂಗೆ : ಭುಗಿಲೆದ್ದ ರೈತರು, ರಣರಂಗವಾದ ರಾಜಧಾನಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel