ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಸೇಫ್ ಅಲ್ಲ..!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣ ಇಡೀ ದೇಶದ ಜನರನ್ನ ಬೆಚ್ಚಿಬೀಳಿಸಿತ್ತು. ಇಡೀ ದೇಶದ ಜನರು ನಿರ್ಭಯಾಗಾಗಿ ಕಣ್ಣೀರಿಟ್ಟಿದ್ದರು. ದೇಶಾದ್ಯಂತ ಜನ ಬೀದಿಗಿಳಿದು ಹೋರಾಟ ಮಾಡಿದ್ದರು. ಅಪರಾಧ ನಡೆದು 8 ವರ್ಷಗಳ ನಂತರ ಕ್ರೂರ ಮೃಗಗಳನ್ನ ಗಲ್ಲಿಗೇರಿಸಿ ನಿರ್ಭಯಾಗೆ ನ್ಯಾಯ ಒದಗಿಸಲಾಗಿದೆ.
ಇಷ್ಟಾದ್ರೂ ರಾಷ್ಟ್ರ ರಾಜದಾನಿಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆಯಾಗ್ತಿಲ್ಲ. ಅದ್ರಲ್ಲೂ ಇತ್ತೀಚೆಗೆ ಈ ಪ್ರಕರಣಗಳು ಹೆಚ್ಚಾಗ್ತಲೇ ಇದೆ. ಕೊರೊನಾ , ಲಾಕ್ ಡೌನ್ ಸಂದರ್ಭದಲ್ಲಿ ಈ ರೀತಿಯಾದ ಪ್ರಕರಣಗಳು ಹೆಚ್ಚಾಗಿದೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಸುರಕ್ಷಿತ ಅಲ್ಲವೆಂದು ಸಾರಿ ಸಾರಿ ಹೇಳ್ತಿದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದತ್ತಾಂಶಗಳು.
ಉತ್ತರಪ್ರದೇಶ – ಗನ್ ಪಾಯಿಂಟ್ ನಲ್ಲಿ 17 ರ ಅಪ್ರಾಪ್ತೆ ಮೇಲೆ ಇಬ್ಬರಿಂದ ಅತ್ಯಾಚಾರ
ಹೌದು ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಮಹಾ ನಗರಗಳ ಪೈಕಿ ದೆಹಲಿಯಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು ಮಹಿಳೆಯರು ಎಷ್ಟರ ಮಟ್ಟಿಗೆ ಸುರಕ್ಷಿತರು ಎಂಬ ಸವಾಲು ಹುಟ್ಟುವಂತಾಗಿದೆ. ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರ ಕೊಲೆ ಪ್ರಕರಣಗಳು 2019 ಮತ್ತು 2020 ರ ನಡುವೆ ಶೇ.18 ರಷ್ಟು ದಾಖಲಾಗಿವೆ. 2020 ರಲ್ಲಿ ಒಟ್ಟು 2.4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಂದ್ರೆ ದಿನವೊಂದಕ್ಕೆ 650 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನೂ ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಕಳೆದ ವರ್ಷ 19,964 , ಮುಂಬೈನಲ್ಲಿ 50,000 ಪ್ರಕರಣಗಳು ದಾಖಲಾಗಿವೆ.
ತಾಲಿಬಾನ್ ರಾಕ್ಷಸರಿಂದ ಜೀವ ಭಯ – ಪಾಕ್ ನಲ್ಲಿ ಆಶ್ರಯ ಪಡೆದ ಅಫ್ಗಾನ್ ಫುಟ್ ಬಾಲ್ ಆಟಗಾರ್ತಿಯರು








