ದೆಹಲಿ ಗಲಭೆ ಪ್ರಕರಣ: ನಟ ದೀಪ್ ಸಿಧು ಅರೆಸ್ಟ್
ನವದೆಹಲಿ: ಗಣರಾಜ್ಯೋತ್ಸವ ದೆಹಲಿಯ ಕೆಂಪು ಕೋಟೆಯಲ್ಲಿ ರೈತರ ಪ್ರತಿಭಟನೆವೇಳೆ ನಡೆದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಈ ವೇಳೆ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ ರೈತರು ಹಾಗೂ ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಕೆಂಪು ಕೋಟೆಯ ಗುಂಬಜ್ ಮೇಲಿದ್ದ ರಾಷ್ಟ್ರ ಧ್ವಜ ಇಳಿಸಿ ಧಾರ್ಮಿಕ ಧ್ವಜ ಆರೋಹಣ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪ ಎದುರಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರನ್ನು ಇದೀಗ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದಾಖಲೆ ಬೆಲೆಗೆ ಮಾರಾಟವಾದ ಡಬ್ಬಿ ಮೆಣಸಿನಕಾಯಿ..!
ಪೊಲೀಸರು ದೀಪ್ ಸಿಧು ಪತ್ತೆಗಾಗಿ ಎಸ್‍ಡಬ್ಲ್ಯೂಆರ್ ವಲಯದ ವಿಶೇಷ ಸೆಲ್ ರಚಿಸಿ, ಶೋಧ ಕಾರ್ಯ ಮುಂದುವರಿಸಿದ್ದರು. ದೀಪ್ ಇರುವ ಮಾಹಿತಿ ನೀಡಿದವರಿಗೆ ಒಂದು ಲಕ್ಷ ನಗದು ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಈತನ ಜತೆ ಜುಗ್‍ರಾಜ್ ಸಿಂಗ್ ಗುರ್ಜೊತ್ ಸಿಂಗ್ ಮತ್ತು ಗುರ್ಜಾಂತ್ ಸಿಂಗ್ ಬಗ್ಗೆ ಸುಳಿವು ನೀಡಿದವರಿಗೂ ಒಂದು ಲಕ್ಷ ನಿಡುವುದಾಗಿ ಘೋಷಿಸಿದ್ದರು. ಇತರರ ಆರೋಪಿಗಳ ಮೇಲೆ 50 ಸಾವಿರ ಬಹುಮಾನ ಪ್ರಕಟಿಸಿದ್ದರು.
ದೆಹಲಿ ಹಿಂಡಸಾಚಾರದಲ್ಲಿ ನಡೆದ ಸಂಘರ್ಷದಲ್ಲಿ ಪೊಲೀಸರಿಗೆ ಗಂಭೀರ ಗಾಯಗಳಾಗಿದ್ದವು. 300ಕ್ಕೂ ಹೆಚ್ಚು ಪೊಲಸರು ಗಾಯಗೊಂಡಿದ್ರು. ಈ ಸಂಬಂಧಪಟ್ಟಂತೆ ಆರೋಪಿ ದೀಪ್ ಸಿಧುನನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದೆ.
ಮತ್ತೆ ಸಿಡಿದ ಸಾರಿಗೆ ನೌಕರರು : ನಾಳೆ 1 ಗಂಟೆಗೆ ಬೃಹತ್ ಪ್ರತಿಭಟನೆ
ದೆಹಲಿ ಪೊಲೀಸರು ಈತನ ಪತ್ತೆಗಾಗಿ ಲುಕ್ ಔಟ್ ನೊಟೀಸ್ ಹೊರಡಿಸಿದ14 ದಿನಗಳ ಬಳಿಕ ಬಂಧಿಸಿದ್ದಾರೆ. ಇನ್ನೂ ದೀಪ್ ಸಿಧು ಬಿಜೆಪಿ ಪರ ಎಂಬ ಮಾತುಗಳು ಕೇಳಿಬಂದವು. ಈತ ಪ್ರಧಾನಿ ಮೋದಿಯವರೊಂದಿಗೆ ನಿಂತುಕೊಂಡಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








