ದೆಹಲಿ ಸ್ಫೋಟ ಪ್ರಕರಣ ತನಿಖೆಯಲ್ಲಿ ದಿನೇ ದಿನೇ ಹೊಸ ಅಂಶಗಳು ಬೆಳಕಿಗೆ ಬರುತ್ತಿವೆ. ಇದೀಗ ಮುಖ್ಯ ಆರೋಪಿ 46 ವರ್ಷದ ಶಾಹೀನ್ ಅವರ ವೈಯಕ್ತಿಕ ಜೀವನವೇ ತನಿಖಾಧಿಕಾರಿಗಳಿಗೆ ಮತ್ತಷ್ಟು ಅಚ್ಚರಿ ಹುಟ್ಟಿಸುವಂತೆ ಮಾಡಿದೆ.
ತನಿಖೆಯ ವೇಳೆ ಶಾಹೀನ್ ಗೆ ಈಗಾಗಲೇ ಮೂರು ಮದುವೆಯಾಗಿದೆ ಎಂಬ ಸಂಗತಿ ದೃಢಪಟ್ಟಿದೆ.
ಮೊದಲ ಎರಡು ಮದುವೆಗಳು ಹಿಂದೆಯೇ ನಡೆದಿದ್ದವು. ಬಳಿಕ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ತಮ್ಮ ಜೂನಿಯರ್ ಆಗಿದ್ದ ಡಾ. ಮುಜಮ್ಮಿಲ್ ಶಕೀಲ್ ಅವರನ್ನು ಪರಿಚಯವಾಗಿದೆ.
ಪರಿಚಯ ನಂತರ ಸಂಬಂಧವಾಗಿ ಬೆಳೆದು, ಸೆಪ್ಟೆಂಬರ್ 2023ರಲ್ಲಿ ಇಬ್ಬರೂ ಮದುವೆಯಾಗಿದ್ದರು.
ಮುಜಮ್ಮಿಲ್ ಜೊತೆಗಿನ ಈ ಸಂಬಂಧದ ಮೂಲಕವೇ ಶಾಹೀನ್ ಜೆಇಎಂ ಮಹಿಳಾ ಘಟಕದ ಸಂಪರ್ಕಕ್ಕೆ ಬಂದಿರುವುದು ತನಿಖೆಯಲ್ಲಿ ಪತ್ತೆಮಾಡಲಾಗಿದೆ. ಮಹಿಳಾ ಘಟಕದ ಚಟುವಟಿಕೆಗಳಲ್ಲಿ ಶಾಹೀನ್ ಸಕ್ರಿಯವಾಗಿದ್ದರು ಎನ್ನಲಾಗಿದೆ.
ದೆಹಲಿ ಸ್ಫೋಟ ಪ್ರಕರಣದಲ್ಲಿ ಶಾಹೀನ್ ಮತ್ತು ಅವರ ತೃತೀಯ ಪತಿ ಮುಜಮ್ಮಿಲ್ ಶಕೀಲ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದ್ದು, ಶಾಹೀನ್ ಅವರ ಸಂಬಂಧಗಳು ಮತ್ತು ಅವರ ಮೂಲಕ ನಡೆದಿರುವ ಚಟುವಟಿಕೆಗಳ ಬಗ್ಗೆ ಗಂಭೀರವಾಗಿ ವಿಚಾರಣೆ ಮುಂದುವರಿಯುತ್ತಿದೆ.
ಈ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಭದ್ರತಾ ಸಂಸ್ಥೆಗಳು ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿವೆ.








