Delhi-capitals | ಡೆಲ್ಲಿ ತಂಡ ಮೆಗಾ ಹರಾಜಿನಲ್ಲಿ ತಪ್ಪು ಮಾಡಿದೆ
ಇಂಡಿಯನ್ ಪ್ರಿಮಿಯರ್ ಲೀಗ್ ಸಂಗ್ರಾಮಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಮಾರ್ಚ್ 26 ರಿಂದ 15ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಕಷ್ಟು ಸ್ಟಾರ್ ಆಟಗಾರರನ್ನು ಖರೀದಿಸಿದೆ. ಆದ್ರೆ ಹರಾಜಿನಲ್ಲಿ ಡೆಲ್ಲಿ ಅನುಸರಿಸಿದ ತಂತ್ರ ಸರಿಯಿಲ್ಲ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ನಿರ್ದಿಷ್ಟವಾಗಿ ವಿದೇಶಿ ಆಟಗಾರರನ್ನು ಆಯ್ಕೆ ಮಾಡುವಲ್ಲಿ ದೆಹಲಿ ವಿಫಲವಾಗಿದೆ ಎಂದು ವಾಸೀಂ ಹೇಳಿದ್ದಾರೆ.
ಐಪಿಎಲ್-2022ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ ಕೇವಲ ಏಳು ವಿದೇಶಿ ಆಟಗಾರರನ್ನು ಖರೀದಿಸಿದೆ. ಇವರಲ್ಲಿ ಸೌಥ್ ಆಫ್ರಿಕಾದ ಬೌಲರ್ ಟೂರ್ನಿಗೆ ಅಲಭ್ಯರಾಗಲಿದ್ದಾರೆ.
ಜೊತೆಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ವಾಸಿಂ ಜಾಫರ್ ಮಾತನಾಡಿದ್ದು, ”ಐಪಿಎಲ್-2022ರ ಮೆಗಾ ಹರಾಜಿನಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಪ್ಪು ತಂತ್ರ ಅನುಸರಿಸಿದೆ.
ಅಂತರಾಷ್ಟ್ರೀಯ ಸರಣಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಟಗಾರರನ್ನು ಖರೀದಿಸಬೇಕು. ಹರಾಜಿನಲ್ಲಿ ಗರಿಷ್ಠ 8 ವಿದೇಶಿ ಕ್ರಿಕೆಟಿಗರನ್ನು ಖರೀದಿಸಲು ಅವಕಾಶವಿತ್ತು. ಆದ್ರೆ ದೆಹಲಿ ಏಳು ವಿದೇಶಿ ಆಟಗಾರರನ್ನು ಮಾತ್ರ ಆಯ್ಕೆ ಮಾಡಿದೆ, ”ಎಂದು ಹೇಳಿದರು.
ಇನ್ನು ಸೀಸನ್ ನಲ್ಲಿ ”ಮಂದೀಪ್ ಸಿಂಗ್ ಅಥವಾ ಯಶ್ ಧೂಲ್ ಡೆಲ್ಲಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಒನ್ ಡೌನ್ ನಲ್ಲಿ ಸರ್ಫರಾಜ್ ಖಾನ್ ಬ್ಯಾಟಿಂಗ್ ಗೆ ಬರಬಹುದು.
ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಯುವ ಸ್ಪಿನ್ನರ್‌ಗಳಾದ ಪ್ರವೀಣ್ ದುಬೆ ಮತ್ತು ಲಲಿತ್ ಯಾದವ್ ಮಾತ್ರ ಇದ್ದಾರೆ.
ಆದರೆ, ಧವನ್, ಅಯ್ಯರ್ ಮತ್ತು ಅಶ್ವಿನ್ ಅವರಂತಹ ಆಟಗಾರರನ್ನು ಬಿಟ್ಟು ಡೆಲ್ಲಿ ತಪ್ಪು ಮಾಡಿದೆ,” ಎಂದು ಜಾಫರ್ ಹೇಳಿದ್ದಾರೆ.









