ದೆಹಲಿ ವಿಧಾನಸಭಾ ಚುನಾವಣೆಗಾಗಿ ₹40 ಲಕ್ಷಗಳನ್ನು ಸಂಗ್ರಹಿಸಲು ಕ್ರೌಡ್ ಫಂಡಿಂಗ್ ಅಭಿಯಾನವನ್ನು ಇಂದು ಸಿಎಂ ಆತಿಶಿ ಆರಂಭಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಂದ ಪಡೆಯುವ ಸಣ್ಣ ಪುಟ್ಟ ದೇಣಿಗೆಗಳು ರಾಜಕೀಯಕ್ಕೆ ಪಕ್ಷದ ಪ್ರಾಮಾಣಿಕ ವಿಧಾನವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಾರ್ಪೋರೇಟ್ ದೇಣಿಗೆಗಳನ್ನು ಅವಲಂಬಿಸಿರುವ ಇತರ ಪಕ್ಷಗಳಿಗಿಂತ ನಾವು ಭಿನ್ನ. ಸಾಮಾನ್ಯ ನಾಗರಿಕರ ಬೆಂಬಲವೇ ನಮ್ಮ ಪಕ್ಷದ ಪ್ರಚಾರದ ಮೂಲ ಆಧಾರವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕಿಯೋನಿಕ್ಸ್ ವೆಂಡರ್ಸ್:ನಾವುಗಳು ಆತ್ಮಹತ್ಯೆ ಮಾಡಿಕೊಂಡರೆ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಶರತ್ ಬಚ್ಚೇಗೌಡರೇ ನೇರ ಹೊಣೆ
ಬಾಕಿ ಬಿಲ್ಲಿನ ಹಣವನ್ನು ಪಾವತಿ ಮಾಡದೇ ಕಳೆದ ಒಂದೂವರೆ ವರ್ಷದಿಂದ ಕಿರುಕುಳ ನೀಡುತ್ತಿದ್ದಾರೆ. ಇದರಿಂದ 400-500 ಕಿಯೋನಿಕ್ಸ್ ವಂಡರ್ಸ್ಗಳು ಬೇಸತ್ತು ಹೋಗಿದ್ದಾರೆ. ಅಲ್ಲದೇ, ನಮ್ಮನ್ನೇ ನಂಬಿಕೊಂಡು ನಮಲ್ಲಿ...