ಆನ್ಲೈನ್ನಲ್ಲಿ ಸೋಫಾ ಸೆಟ್ ಮಾರಲು ಹೋಗಿ ಮೋಸ ಹೋದ ದೆಹಲಿ ಸಿಎಂ ಕೇಜ್ರಿವಾಲ್ ಪುತ್ರಿ
ಹೊಸದಿಲ್ಲಿ, ಫೆಬ್ರವರಿ09: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು ಪೋರ್ಟಲ್ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಸೆಟ್ ಮಾರಾಟ ಮಾಡಲು ಹೋಗಿ ಮೋಸ ಹೋಗಿದ್ದಾರೆ. ಹರ್ಷಿತಾ ಕೇಜ್ರಿವಾಲ್ ಸುಮಾರು 34 ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ.
ವಂಚಕ ಹರ್ಷಿತಾಳನ್ನು ವೆಬ್ ಪೋರ್ಟಲ್ನಲ್ಲಿ ಸಂಪರ್ಕಿಸಿ, ಮಾರಾಟಕ್ಕೆ ಇಟ್ಟಿದ್ದ ಸೆಕೆಂಡ್ ಹ್ಯಾಂಡ್ ಸೋಫಾ ಸೆಟ್ ಖರೀದಿಸಲು ಆಸಕ್ತಿ ತೋರಿಸಿದ. ಆತ ಸೋಫಾ ಸೆಟ್ ಖರೀದಿಸಲು ಒಪ್ಪಿದ್ದರಿಂದ ಒಪ್ಪಂದವನ್ನು ಅಂತಿಮಗೊಳಿಸಿದರು. ಮೊದಲಿಗೆ, ಹರ್ಷಿತಾ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸುವ ಸಲುವಾಗಿ, ಆ ವ್ಯಕ್ತಿ ಹರ್ಷಿತಾಳ ಖಾತೆಗೆ ಸ್ವಲ್ಪ ಮೊತ್ತವನ್ನು ಕಳುಹಿಸಿದನು. ಅದರ ನಂತರ, ಅತ ಕ್ಯೂಆರ್ ಕೋಡ್ ಕಳುಹಿಸಿದ್ದು ಉಳಿದ ಹಣವನ್ನು ಸ್ವೀಕರಿಸಲು ಅದನ್ನು ಸ್ಕ್ಯಾನ್ ಮಾಡಲು ಹೇಳಿದ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಅನುಮೋದಿಸಿದ ಕೃಷಿ ನೀತಿಗಳನ್ನು ಬಿಜೆಪಿ ಪರಿಚಯಿಸಿದೆ – ಪಿಎಂ ಮೋದಿ
ಹರ್ಷಿತಾ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, 20,000 ರುಪಾಯಿ ಖಾತೆಯಿಂದ ಕಡಿತವಾಗಿದೆ. ಅವರು ಅದರ ಬಗ್ಗೆ ಆ ವ್ಯಕ್ತಿಯನ್ನು ಪ್ರಶ್ನಿಸಿದರು. ಆತ ತಪ್ಪಾಗಿ ಬಾರ್ ಕೋಡ್ ಕಳುಹಿಸಿದ್ದಾನೆ ಎಂದು ಅವನು ಅವರಿಗೆ ಹೇಳಿ ನಂತರ ಅವನು ಇನ್ನೊಂದು ಕೋಡ್ ಕಳುಹಿಸಿದ ಮತ್ತು ಹಣವನ್ನು ಸ್ವೀಕರಿಸಲು ಅದೇ ವಿಧಾನವನ್ನು ಅನುಸರಿಸಲು ಹರ್ಷಿತಾಳನ್ನು ಕೇಳಿದನು.
ಅವರು ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಇನ್ನೂ 14,000 ರೂಗಳನ್ನು ಕಳೆದುಕೊಂಡರು. ತನ್ನನ್ನು ಮೋಸಗೊಳಿಸಲಾಗಿದೆ ಎಂದು ಅರಿತುಕೊಂಡ ಹರ್ಷಿತಾ ಕೂಡಲೇ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಬಳಿ ದೂರು ದಾಖಲಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸ್ಲಿಮ್ ಮತ್ತು ಫಿಟ್ ಆಗಿ ಕಾಣಲು ಮೊಸರು ಮತ್ತು ಒಣದ್ರಾಕ್ಷಿ ಮಿಶ್ರಣ https://t.co/FhhitOWXrm
— Saaksha TV (@SaakshaTv) February 6, 2021
ಲಷ್ಕರ್-ಎ-ಮುಸ್ತಫಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಿದಾಯತುಲ್ಲಾ ಮಲಿಕ್ ಬಂಧನ https://t.co/I62nVOadCT
— Saaksha TV (@SaakshaTv) February 7, 2021