ಚೀನಾದ ಅಲಿಬಾಬಾ ಕಂಪನಿಯ ಒಡೆಯನಿಗೆ ನೋಟಿಸ್ ಜಾರಿ ಮಾಡಿದ ದೆಹಲಿ ನ್ಯಾಯಾಲಯ
ಹೊಸದಿಲ್ಲಿ, ಜುಲೈ 27: ನವದೆಹಲಿಯ ಸಿವಿಲ್ ನ್ಯಾಯಾಲಯ ಭಾರತದ ವಿರುದ್ಧ ಸುಳ್ಳು ಸುದ್ದಿ ಹರಡಿದ ಆರೋಪದ ಹಿನ್ನಲೆಯಲ್ಲಿ ಚೀನಾದ ಅತಿದೊಡ್ಡ ಶ್ರೀಮಂತ ಉದ್ಯಮಿ ಹಾಗೂ ಅಲಿಬಾಬಾ ಕಂಪನಿಯ ಒಡೆಯ ಜ್ಯಾಕ್ ಮಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಚೀನಾ ಅಂತರ್ಜಾಲ ಯುಸಿ ಬ್ರೌಸರ್ ಸಂಸ್ಥೆಯ ಮಾಜಿ ಉದ್ಯೋಗಿ ಪುಷ್ಪೇಂದ್ರ ಸಿಂಗ್ ಪರಮಾರ್ ಭಾರತದ ವಿರುದ್ಧ ಸುಳ್ಳು ಸುದ್ದಿಗಳನ್ನು ಓದಲು ತನ್ನ ಬ್ರೌಸರ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಹಾಗಾಗಿ ಯುಸಿ ಬ್ರೌಸರ್ ಒಡೆತನ ಹೊಂದಿರುವ ಜ್ಯಾಕ್ ಮಾ ಅವರಿಗೆ ನ್ಯಾಯಾಲಯ ಸುಳ್ಳು ಸುದ್ದಿ ಹರಿಬಿಟ್ಟ ಆರೋಪದ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದೆ.








