Delhi MCD Election : ಬಹುಮತದತ್ತ ಆಮ್ ಆದ್ಮಿ – ಸಂಭ್ರಮಾಚರಣೆ ಶುರು…
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಯಲ್ಲಿ ಆಪ್ ಪಕ್ಷ ಬಹುಮತದತ್ತ ಸಾಗುತ್ತಿದೆ.
ಚುನಾವಣಾ ಆಯೋಗದ ಪ್ರಕಾರ, ಎಎಪಿ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, 83 ಸ್ಥಾನಗಳಲ್ಲಿ ಗೆಲುವು ಸಾಧಿಸಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು, 5 ಕ್ಷೇತ್ರಗಳಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಎಂಸಿಡಿಯಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ. ಇಲ್ಲಿ 15 ವರ್ಷ ಬಿಜೆಪಿ ಹಿಡಿತದಲ್ಲಿತ್ತು.
ಆಮ್ ಆದ್ಮಿ- 31 ಸ್ಥಾನಗಳಲ್ಲಿ ಮುನ್ನಡೆ 104 ಸ್ಥಾನಗಳಲ್ಲಿ ಗೆಲುವು
ಬಿಜೆಪಿ – 31 ಲೀಡ್ 83 ಸ್ಥಾನಗಳಲ್ಲಿ ಗೆಲುವು
ಕಾಂಗ್ರೆಸ್ – 5 ಗೆಲುವು 5 ರಲ್ಲಿ ಮುನ್ನಡೆ
ಸ್ವತಂತ್ರರು 2 ಗೆಲುವು 1 ಮುನ್ನಡೆ
ಬೆಳಿಗ್ಗೆ 8 ಗಂಟೆಗೆ ಆರಂಭಿಕ ಟ್ರೆಂಡ್‌ಗಳು ಬಂದ ತಕ್ಷಣ, ಬಿಜೆಪಿ ಮತ್ತು ಎಎಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೊದಲ ಎರಡು ಗಂಟೆಗಳಲ್ಲಿ ಉಭಯ ಪಕ್ಷಗಳ ನಡುವೆ 10ರಿಂದ 20 ಸ್ಥಾನಗಳ ಅಂತರ ಕಂಡುಬಂದಿದೆ. ಕೆಲವೊಮ್ಮೆ ಬಿಜೆಪಿ ಮುಂದಿದ್ದರೆ ಇನ್ನು ಕೆಲವೊಮ್ಮೆ ಎಎಪಿ ಮುಂದಿತ್ತು. ಆದರೆ ಬೆಳಿಗ್ಗೆ 10.30 ರ ನಂತರ ಪರಿಸ್ಥಿತಿ ಬದಲಾಯಿತು ಮತ್ತು ಎಎಪಿ ಬಿಜೆಪಿಗಿಂತ ಮುನ್ನಡೆ ಸಾಧಿಸಿತು.
Delhi MCD Election : Aam Aadmi in majority – Celebration begins…