Delhi MCD Election : ಆಪ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ…
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿದ್ದು, BJP ಮತ್ತು ಆಪ್ ಪಕ್ಷಗಳು ತಲಾ ಒಂದು ಸ್ಥಾನ ಗೆದ್ದಿವೆ. ಲಕ್ಷ್ಮಿ ನಗರದಲ್ಲಿ ಬಿಜೆಪಿ ಮತ್ತು ದರಿಯಾಗಂಜ್ ಸ್ಥಾನವನ್ನ ಎಎಪಿ ವಶಮಾಡಿಕೊಂಡಿದೆ.
ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯುತ್ತಿದ್ದು, ಸುದ್ದಿ ವಾಹಿನಿಗಳ ಪ್ರಕಾರ, 250 ಸ್ಥಾನಗಳಲ್ಲಿ ಎಎಪಿ 124 ಮತ್ತು ಬಿಜೆಪಿ 117 ರಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮೆಜಾರಿಟಿ ಪಡೆಯಲು ಒಂದು ಪಕ್ಷ 126 ಸ್ಥಾನಗಳನ್ನ ಗೆಲ್ಲಬೇಕು..
ಡಿಸೆಂಬರ್ 4 ರಂದು ನಡೆದ ಮತದಾನದಲ್ಲಿ ಕೇವಲ 50.48% ಮತದಾನವಾಗಿದೆ – ಒಟ್ಟು 1.45 ಕೋಟಿ ಅರ್ಹ ಮತದಾರರಲ್ಲಿ ಕೇವಲ 73 ಲಕ್ಷ ಜನರು ಮತದಾನ ಮಾಡಿದ್ದಾರೆ.
Delhi MCD Election : Fierce competition between AAP and BJP…