ಲಾಡೆನ್ ನನ್ನು ಹೊಡೆದುರುಳಿಸಲು ನೆರವಾದ ನಾಯಿ ತಳಿ ದೆಹಲಿ ಮೆಟ್ರೋ ಕಾಪಾಡಲು ಸಜ್ಜು
ಹೊಸದಿಲ್ಲಿ, ಅಗಸ್ಟ್02: ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸುವ ಕಾರ್ಯಚರಣೆಯಲ್ಲಿ ಯುಎಸ್ ತಂಡಕ್ಕೆ ಸಹಾಯ ಮಾಡಿದ ನಾಯಿ ತಳಿ ಮುಂದಿನ ವಾರದಿಂದ ದೆಹಲಿ ಮೆಟ್ರೋವನ್ನು ಕಾಪಾಡಲು ಸಜ್ಜಾಗಿದೆ
ದೆಹಲಿ ಮೆಟ್ರೊದಲ್ಲಿ ನಿಯೋಜಿಸಲಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಭದ್ರತಾ ನವೀಕರಣಕ್ಕೆ ಮುಂದಾಗಿದೆ . ವಿಶೇಷ ಕೌಶಲ್ಯಗಳನ್ನು ಹೊಂದಿರುವ ಪೋಲೊ ಹೆಸರಿನ ಚುರುಕುಬುದ್ಧಿಯ ಬೆಲ್ಜಿಯಂ ಮಾಲಿನೋಯಿಸ್ ನಾಯಿ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ದೆಹಲಿ ಮೆಟ್ರೊವನ್ನು ಕಾಪಾಡುವ ಸಿಐಎಸ್ಎಫ್ ಗೆ ಸಹಾಯ ಮಾಡಲು ಸಜ್ಜಾಗಿದೆ.
ಒಸಾಮಾ ಬಿನ್ ಲಾಡೆನ್ ನನ್ನು ನಿರ್ಮೂಲನೆ ಮಾಡಲು ಯುಎಸ್ ಭದ್ರತಾ ಪಡೆಗಳು ಪ್ರಾರಂಭಿಸಿದ ಕಾರ್ಯಾಚರಣೆಯಲ್ಲಿ ಇದೇ ತಳಿಯ ನಾಯಿಗಳು ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸಿತ್ತು. ಇದೇ ತಳಿಯ ಕೈರೋ ಎಂಬ ನಾಯಿ ಕಾರ್ಯಾಚರಣೆಯ ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ ಅನ್ನು ಗುರುತಿಸಿತ್ತು. ನಾಯಿಗಳು ಅವನ ಗುರುತನ್ನು ಪತ್ತೆ ಹಚ್ಚಿದ ನಂತರ, ಒಸಾಮಾನನ್ನು ಅಮೆರಿಕ ಹತ್ಯೆ ಮಾಡಿತ್ತು .
ರಾಷ್ಟ್ರ ರಾಜಧಾನಿಯಲ್ಲಿನ ಯಾವುದೇ ಭದ್ರತಾ ಕಾರ್ಯದಲ್ಲಿ ಬೆಲ್ಜಿಯಂ ಮಾಲಿನೋಯಿಸ್ ತಳಿ ನಾಯಿಯನ್ನು ನಿಯೋಜಿಸುವುದು ಇದೇ ಮೊದಲು.
ಸಿಐಎಸ್ಎಫ್ ಸಾಮಾನ್ಯವಾಗಿ ಪ್ರತಿ ನಾಯಿ ಒಂದು ವಿಷಯಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ ಪೊಲೊ ವಿಶೇಷ ನಾಯಿಯಾಗಿರುವುದರಿಂದ, ಅದು ಮೂರೂ ಹಂತದಲ್ಲಿ ಚಾಣಾಕ್ಷ್ಯತೆಯಿಂದ ಕಾರ್ಯನಿರ್ವಹಿಸುತ್ತವೆ.
ಚುರುಕುತನ, ಕೌಶಲ್ಯ ಮತ್ತು ಸ್ನಿಫಿಂಗ್ ಪ್ರಜ್ಞೆಯ ಕಾರಣದಿಂದಾಗಿ ಈ ನಾಯಿಯು ಇತರ ನಾಯಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಈ ನಾಯಿ ಸುಮಾರು 40 ಕಿಲೋಮೀಟರ್ ನಡೆಯಬಹುದು ಮತ್ತು ಇತರ ನಾಯಿಗಳು 4 ರಿಂದ 7 ಕಿಲೋಮೀಟರ್ ನಡೆಯಬಲ್ಲದು. ಯಾವುದೇ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಈ ನಾಯಿ ದಾಳಿ ಮಾಡಬಹುದು ಮತ್ತು ಅತ್ಯುತ್ತಮ ಸ್ನಿಫಿಂಗ್ ಪ್ರಜ್ಞೆಯನ್ನು ಹೊಂದಿದೆ ಎಂದು ಕೆ 9 ತಂಡದ ಮುಖ್ಯಸ್ಥ ಇನ್ಸ್ಪೆಕ್ಟರ್ ರಾಜೇಂದರ್ ಪಿಲಾನಿಯಾ ತಿಳಿಸಿದ್ದಾರೆ.
ರಾಜೀವ್ ಚೌಕ್, ಕಾಶ್ಮೀರಿ ಗೇಟ್ ಮುಂತಾದ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಈ ನಾಯಿಗಳನ್ನು ನಿಯೋಜಿಸಲಾಗುವುದು. ಆದರೆ ನಾವು ಇವುಗಳನ್ನು ಕಳ್ಳತನ ಪ್ರಕರಣಗಳಲ್ಲಿಯೂ ಬಳಸಬಹುದು. ಪೊಲೊ ಇತರ ನಾಯಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಅವರು ಹೇಳಿದರು.
ಸಿಐಎಸ್ಎಫ್ 61 ನಾಯಿಗಳನ್ನು ಹೊಂದಿದ್ದು, ಅವರನ್ನು ದೆಹಲಿ ಮೆಟ್ರೋದ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗುವುದು.








