Delhi : ಲಿಫ್ಟ್ ನಲ್ಲಿ ಸಿಲುಕಿ 9 ವರ್ಷದ ಮಗು ಸಾವು…..
ನಾಲ್ಕು ಅಂತಸ್ತಿನ ವಸತಿ ಕಟ್ಟಡದ ಎಲಿವೇಟರ್ ಮತ್ತು ಶಾಫ್ಟ್ ನಡುವೆ ಸಿಲುಕಿ ಒಂಬತ್ತು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಲಾಂಡ್ರಿ ಕೆಲಸ ಮಾಡುತ್ತಿದ್ದ ದಂಪತಿಗಳ ಮಗನಾದ ಬಾಲಕ ಆಶೀಶ್ ಸಾವನ್ನಪ್ಪಿದ್ದಾನೆ. ತಾಯಿ ರೇಖಾ ಬಟ್ಟೆ ಸಂಗ್ರಹಿಸಲು ಮೆಟ್ಟಿಲು ಬಳಿಸಿದರೆ ಹುಡುಗ ಲಿಫ್ಟ್ ಬಳಸಲು ಮಂದಾಗಿದ್ದಾನೆ. ಈ ವೇಳೆ ಲಿಫ್ಟ್ ಅವಘಡ ಸಂಭವಿಸಿ ಬಾಲಕ ಸಾವನ್ನಪ್ಪಿದ್ದಾನೆ.
ಆಶಿಶ್ ತಂದೆ ರಮೇಶ್ ಮಾತನಾಡಿ, “ ನನ್ನ ಹೆಂಡತಿ ಬಟ್ಟೆ ಸಂಗ್ರಹಿಸಿ ನಮ್ಮ ಅಂಗಡಿಗೆ ಮರಳಿ ಬಂದಳು. ಆನಂತರ ಮಗನ ಬಗ್ಗೆ ಕೇಳಿದಳು. ಅವನು ನಿನ್ನನ್ನ ಹಿಂಬಾಲಿಸಿದ ಎಂದು ಅವಳಿಗೆ ಹೇಳಿದೆ. ಅವಳು ವಾಪಸ್ ಕಟ್ಟಕ್ಕೆ ಧಾವಿಸಿ ಬಂದು ಹುಡುಕಿದ್ದಾರೆ. ಲಿಫ್ಟ್ ಗಾಜಿನ ಫಲಕದಿಂದ ಇಣುಕಿ ನೋಡಿದಾಗ ಅವನ ಕಾಲುಗಳು ನೇತಾಡುತ್ತಿರುವುದು ಕಾಣಿಸಿದೆ. ತಕ್ಷಣ ಲಿಫ್ಟ್ ಮೇಲೆತ್ತಿ ಮಗುವನ್ನ ಮೇಲಕ್ಕೆತ್ತಲಾಗಿದೆ.
ತಾಂತ್ರಿಕ ಸಮಸ್ಸೆಯಿಂದ ಲಿಫ್ಟ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಮಗು ಸಿಲುಕಿಕೊಂಡಿದೆ ಎಂದು ಪೊಲೀಸ್ ಉಪ ಕಮಿಷನರ್ (ಪಶ್ಚಿಮ) ಘನಶ್ಯಾಮ್ ಬನ್ಸಾಲ್ ತಿಳಿಸಿದ್ದಾರೆ. ನೆಲಮಹಡಿಯಿಂದ ಮೇಲಕ್ಕೆ ಚಲಿಸುವಾಗ ಹುಡುಗ ಲಿಫ್ಟ್ ಮತ್ತು ಶಾಫ್ಟ್ ನಡುವೆ ಸಿಲುಕಿಕೊಂಡಿರಬಹುದು ಎಂದು ತಿಳಿದುಬಂದಿದೆ.
Delhi : Mommy Don’t know 9-year-old was in lift…..