Delhi Murder : ಕೇವಲ 30 ರುಪಾಯಿಗೋಸ್ಕರ ನಡೆಯಿತು ವ್ಯಕ್ತಿಯೊಬ್ಬನ ಕೊಲೆ….
ಕೇವಲ 30 ರುಪಾಯಿಗಾಗಿ ಇಬ್ಬರು ಸಹೋದರರು ವ್ಯಕ್ತಿಯೊಬ್ಬನನ್ನ ಹೊಡೆದು ಕೊಂದಿರುವ ಘಟನೆ ಗುರುವಾರ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ನಡೆದಿದೆ.
ಮೃತನನ್ನ ಸೋನು ಎಂದು ಗುರುತಿಸಲಾಗಿದೆ. ಮದುವೆ ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಆರೋಪಿಗಳಲ್ಲಿ ಒಬ್ಬನಾದ ರಾಹುಲ್ ಕೂಡ ಆತನೊಂದಿಗೆ ಕೆಲಸ ಮಾಡುತ್ತಿದ್ದ. ವರದಿಯ ಪ್ರಕಾರ, ಸೋನು ರಾಹುಲ್ ನಿಂದ ಹಣ ಪಡೆದಿದ್ದ ಅದೇ ಕಾರಣಕ್ಕೆ ಅವರ ನಡುವೆ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು.
ಘಟನೆ ನಡೆದ ದಿನ ರಾಹುಲ್ ತನ್ನ ಸಹೋದರ ಹರೀಶ್ ಜೊತೆಗೆ ಸೋನು ಅವರನ್ನ ಭೇಟಿ ಮಾಡಿ ಹಣ ವಾಪಸ್ ನೀಡುವಂತೆ ಕೇಳಿದ್ದಾನೆ. ಇದು ಮೂವರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ನಂತರ ಇಬ್ಬರು ಸಹೋದರರು ಸೋನುಗೆ ಥಳಿಸಿದ್ದಾರೆ. ಆರೋಪಿಗಳು ಚಾಕುವಿನಿಂದ ಸೋನು ಹೊಟ್ಟೆಗೆ ಹಲವು ಬಾರಿ ಇರಿದಿದ್ದು, ಬಳಿಕ ಆತ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ.
ಪೊಲೀಸರಿಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತಲುಪಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಸೋನು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಈ ನಡುವೆ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
Delhi Murder : Man thrashed, stabbed to death after dispute over Rs 30 in Delhi’s Model Town