Appu with lord Ganesha | ಅಪ್ಪು ಗಣೇಶ ಮೂರ್ತಿಗೆ ಡಿಮ್ಯಾಂಡ್
ದೇವರ ಜೊತೆ ದೇವರಾದ ರಾಜರತ್ನ
ಗಣೇಶೋತ್ಸವಕ್ಕೆ ಕರ್ನಾಟಕ ಸಿದ್ಧತೆ
ಆಗಸ್ಟ್ 31 ಕ್ಕೆ ಗಣೇಶೋತ್ಸವ
ಗಣಪನ ರೂಪದಲ್ಲಿ ನೆಚ್ಚಿನ ನಟ
ಕರುನಾಡಿನ ರಾಜರತ್ನ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಅಭಿಮಾನಿಗಳು ಅವರನ್ನ ದೇವರ ರೂಪದಲ್ಲಿ ನೋಡುತ್ತಿದ್ದಾರೆ.
ನಿತ್ಯವೂ ಅವರ ಸಮಾಧಿ ಬಳಿಗೆ ಸಾವಿರಾರು ಅಭಿಮಾನಿಗಳು ಬಂದು ನಮಿಸುತ್ತಿದ್ದಾರೆ.
ಸದ್ಯ ಅಪ್ಪು ಸಮಾಧಿಯೇ ದೇವಸ್ಥಾನವಾಗಿದೆ. ಅಷ್ಟೊಂದು ಆರಾಧಿಸುವ ಅಭಿಮಾನಿಗಳು ಈ ಬಾರಿ ಗಣಪನ ರೂಪದಲ್ಲಿ ನೆಚ್ಚಿನ ನಟನನ್ನು ನೋಡಲು ಮುಂದಾಗಿದ್ದಾರೆ.

ಹೌದು..! ಕರ್ನಾಟಕ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗಣಪತಿ ಮೂರ್ತಿ ತಯಾರಕರು ಎರಡು ತಿಂಗಳಿನಿಂದ ಸತತವಾಗಿ ಈ ಕೆಲಸದಲ್ಲಿ ತೊಡಗಿದ್ದಾರೆ.
ಅದರಲ್ಲೂ ಗಣಪತಿ ಜೊತೆ ಇರುವ ಪುನೀತ್ ರಾಜ್ ಕುಮಾರ್ ಅವರ ಮೂರ್ತಿಗಳನ್ನು ತಯಾರಿಸಲು ಹಲವು ದಿನಗಳಿಂದ ಬ್ಯುಸಿಯಾಗಿದ್ದಾರೆ. ಅಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ಪ್ರತಿ ಗಣೇಶೋತ್ಸವದಲ್ಲೂ ಒಂದೊಂದು ಟ್ರೆಂಡ್ ಸೃಷ್ಟಿಯಾಗುತ್ತದೆ. ಅದಕ್ಕೆ ತಕ್ಕಂತೆ ಗಣಪತಿ ಮೂರ್ತಿಗಳನ್ನು ತಯಾರು ಮಾಡಲಾಗುತ್ತದೆ.