RSS ಬ್ಯಾನ್ ಗೆ ಒತ್ತಾಯ : ಯತ್ನಾಳ್ ಹೇಳಿದ್ದೇನು ?
ವಿಜಯಪುರ : ಐದು ವರ್ಷಗಳ ಕಾಲ ದೇಶದಲ್ಲಿ ಪಿಎಫ್ ಐ ಸಂಘಟನೆಯನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇದರ ಬೆನ್ನಲ್ಲೆ ಆರ್ ಎಸ್ ಎಸ್ ಅನ್ನು ಕೂಡ ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಈ ಸಂಬಂಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, RSS ದೇಶಭಕ್ತರ ಸಂಘಟನೆ.
ದೇಶದ ಉನ್ನತ ಸ್ಥಾನದಲ್ಲಿರೋದು RSS ನಿಂದ ಬಂದವರು. ಆರ್ ಎಸ್ ಎಸ್ ಹಿಂಸಾ ಕೃತ್ಯದಲ್ಲಿ ತೊಡಗಿಲ್ಲ.
ಮದ್ದು ಗುಂಡು ಸಂಗ್ರಹಿಸಿಲ್ಲ. ದೇಶವಿರೋಧಿ ಚಟುವಟಿಕೆ ಮಾಡಿಲ್ಲ. ಬೇರೆ ಧರ್ಮದ ಮೇಲೆ ಪ್ರಹಾರ ಮಾಡಿಲ್ಲ.

ಅದರ ಮೇಲಿದ್ದ ನಿಷೇಧವನ್ನ ಸುಪ್ರೀಂ ಕೋರ್ಟೆ ವಾಪಸ್ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಪಿಎಫ್ ಐ ಸಂಘಟನೆ ಬ್ಯಾನ್ ಬಗ್ಗೆ ಮಾತನಾಡಿದ ಯತ್ನಾಳ್, ಪ್ರಧಾನಿಗಳು, ಕೇಂದ್ರ ಗೃಹ ಸಚಿವರು PFI ಬ್ಯಾನ್ ಮಾಡಿದ್ದಾರೆ.
ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ PFI ಬ್ಯಾನ್ ಮಾಡಲು ಆಗ್ರಹ ಇತ್ತು.
ಇಂದು ನಮ್ಮ ಜನ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ.
ಸಾಕ್ಷ್ಯಾಧಾರ ಸಹಿತವಾಗಿ ಕೇಂದ್ರ ಬ್ಯಾನ್ ಮಾಡಿದೆ. ದೇಶಾದ್ಯಂತ ದಾಖಲೆ ರೀತಿಯಲ್ಲಿ ರೇಡ್ ಮಾಡಿದ್ದಾರೆ.
ಪುರಾವೆಗಳು ಸಿಕ್ಕಿವೆ, ದೇಶ ಒಡೆಯಲು ಸಾವಿರಾರು ಕೋಟಿ ವಿದೇಶದಿಂದ ಬರ್ತಿತ್ತು. ಪಾಕಿಸ್ತಾನ, ಯುಎಇ ಜೊತೆಗೆ PFI ಸಂಬಂಧ ಇತ್ತು ಎಂದು ಯತ್ನಾಳ್ ಹೇಳಿದ್ದಾರೆ.