ಅಧಿಕಾರ ಬಿಟ್ಟುಕೊಡದೇ ಮೊಂಡುತನ ಮುಂದುವರೆಸಿದ ಟ್ರಂಪ್ ಗೆ ದೊಡ್ಡ ಸಂಕಷ್ಟ..!
ಅಮೆರಿಕಾ: ಅಮೆರಿಕಾದ ಸಂಸತ್ ಭವನದ ಬಳಿ ಟ್ರಂಪ್ ಬೆಂಬಲಿಗರ ದಾಂಧಲೆ, ಹಿಂಸಾಚಾರದ ನಂತರವೂ ಟ್ರಂಪ್ ಮಾತ್ರ ಅಧಿಕಾರ ಬಿಟ್ಟುಕೊಡಲು ನಿರಾಕರಿಸುತ್ತಾ ಮೊಂಡುತನ ಮುಂದುವರೆಸಿದ್ದಾರೆ. ಹೀಗಾಗಿ ಅವರ ವಿರುದ್ಧ ವಾಗ್ದಂಡನೆ ಮಂಡಿಸಲು ಡೆಮಾಕ್ರಟಿಕ್ ಪಕ್ಷದ ಸಂಸದರು ಮುಂದಾಗಿದ್ದಾರೆ.
ಡೆಮಾಕ್ರಟಿಕ್ ಪಕ್ಷ ನಿರ್ಣಯ ಮಂಡಿಸಿದ್ದೇ ಆದರೆ, ಟ್ರಂಪ್ ವಿರುದ್ಧದ ಎರಡನೇ ವಾಗ್ದಂಡನೆ ಪ್ರಕ್ರಿಯೆ ಇದಾಗಲಿದೆ. ಇನ್ನೂ ಸೋಮವಾರದಿಂದಲೇ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತಿಯಿದೆ ಎನ್ನಲಾಗ್ತಿದೆ.
ಭಾರತೀಯ ಸೇನೆ ಬಂಧಿಸಿದ ಯೋಧನನ್ನ ವಾಪಸ್ ಕಳುಹಿಸುವಂತೆ ಚೀನಾ ಮನವಿ!
ವಾಗ್ದಂಡನೆ ಎಂದರೇನು..?
ಇದೊಂದು ದೀರ್ಘ ಕಾಲದ ಪ್ರಕ್ರಿಯೆಯಾಗಿದ್ದು, ಪೂರ್ಣಗೊಳ್ಳಲು ಹಲವು ವಾರಗಳೇ ಬೇಕಾಗುತ್ತವೆ. ಹೀಗಾಗಿ ಜೋ ಬೈಡನ್ ಅವರು ಅಧಿಕಾರ ವಹಿಸಿಕೊಳ್ಳುವ ಜ.20ರ ವೇಳೆಗೆ ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಗಳಿಲ್ಲ.
ಟ್ರಂಪ್ ಅವರಾಗಿಯೇ ರಾಜೀನಾಮೆ ನೀಡದೇ ಹೋದರೆ, ಅಥವಾ ಅಧ್ಯಕ್ಷರನ್ನು ಕ್ಯಾಬಿನೆಟ್ ವಜಾ ಮಾಡುವ 25ನೇ ತಿದ್ದುಪಡಿಯನ್ನು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಮಂಡಿಸದೇ ಹೋದರೆ ಡೆಮಾಕ್ರಟಿಕ್ ನ ಸಂಸದರು ವಾಗ್ದಂಡನೆ ಪ್ರಕ್ರಿಯೆ ಆರಂಭಿಸುತ್ತಾರೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಎಚ್ಚರಿಸಿದ್ದಾರೆ.
ಫೆ.08 ರ ಬಳಿಕ WhatsApp ಡಿಲೀಟ್ ಆಗುತ್ತಾ..? New Privacy Policy Update ಬಗ್ಗೆ ಸಂಪೂರ್ಣ ಮಾಹಿತಿ
ಡೆಮಾಕ್ರಟಿಕ್ ಪ್ರಕ್ಷದ ಸಂಸದ ಟೆಡ್ ಲಿಯು ಪ್ರಕಾರ, ಅಮೆರಿಕ ಕಾಂಗ್ರೆಸ್ನ ಕನಿಷ್ಠ 180 ಸದಸ್ಯರು ಟ್ರಂಪ್ ಮೇಲೆ ಆರೋಪ ಹೊರಿಸಿ, ವಾಗ್ದಂಡನೆ ಪ್ರಸ್ತಾವದ ಕಡತಕ್ಕೆ ಸಹಿ ಮಾಡಿದ್ದಾರೆ.
ವಿಶೇಷಚೇತನರ ವಾಹನಗಳಿಗೆ ಫಾಸ್ಟ್ಯಾಗ್ ಸೌಲಭ್ಯ ಫ್ರೀ..!
ಇನ್ನೂ ಅಮೆರಿಕಾದಲ್ಲಿ ನಡೆದ ಹಿಂಸಾಚಾರದಲ್ಲಿ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದರು. ಇನ್ನೂ ಈ ಘಟನೆ ಇಡೀ ಅಮೆರಿಕಾವನ್ನೇ ಬೆಚ್ಚಿಬೀಳಿಸಿತ್ತು. ಇದೇ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಟ್ರಂಪ್ ಅವರ ಇನ್ಸ್ಟಾಗ್ರಾಂ, ಫೇಸ್ ಬುಕ್ , ಟ್ವಿಟ್ಟರ್ ಖಾತೆಗಳನ್ನ ಬ್ಲಾಕ್ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತ 2 ಜಿಬಿ ಡೇಟಾ : ಸಂಕ್ರಾಂತಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel