ಬೆಂಗಳೂರು: ಹೌದು, ಇಂದಿನಿಂದ ಕೇವಲ 10 ರೂಪಾಯಿಗೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಬಹುದು.

ಬೆಂಗಳೂರು-ದೇವನಹಳ್ಳಿ ನಡುವೆ ಡೆಮೂ ರೈಲು ಸಂಚಾರ ಇಂದಿನಿಂದ ಪ್ರಾರಂಭವಾಗಿದ್ದು, ಕೇವಲ 10ರಿಂದ 15 ರೂ. ಜತೆಗೆ ಕೇವಲ 50 ನಿಮಿಷದಲ್ಲಿ ಏರ್ಪೋರ್ಟ್ಗೆ ತಲುಪಬಹುದು. ಜತೆಗೆ ಯಾವುದೇ ಟ್ರಾಫಿಕ್ ಜಾಮ್ ಕಿರಿಕಿರಿ ಕೂಡ ಇರುವುದಿಲ್ಲ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮೆಜೆಸ್ಟಿಕ್)ದಿಂದ ದೇವನಹಳ್ಳಿಗೆ ಇಂದು ಬೆಳಿಗ್ಗೆ ವಿಶೇಷ ಡೆಮು ರೈಲು ಸೇವೆ ಆರಂಭವಾಗಿದೆ. ವಿಶೇಷ ರೈಲಿನಲ್ಲಿ ಸಂಸದ ಪಿ.ಸಿ. ಮೋಹನ್ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಯಾಣಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರೈಲಿನಲ್ಲಿ ಸೀಟುಗಳ ಮಧ್ಯೆ ಅಂತರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಈ ವಿಶೇಷ ರೈಲು ಕೆಂಪೇಗೌಡ ಏರ್ಪೋರ್ಟ್ಗೆ ಬಳಿಯ ಹಾಲ್ಟ್ ಸ್ಟೇಷನ್ನಲ್ಲಿ ನಿಲ್ಲಿದೆ. ಜತೆಗೆ ರೈಲಿಗೆ ಯಲಹಂಕದಲ್ಲಿ ಸ್ಟಾಪ್ ಕೂಡ ಇರಲಿದೆ. ಹಾಲ್ಟ್ ಸ್ಟೇಷನ್ನಿಂದ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ಗಳ ಮೂಲಕ ಕರೆದೊಲಾಗುತ್ತದೆ. ಅದೂ ಕೂಡ ಸಂಪೂರ್ಣ ಉಚಿತವಾಗಿದೆ.
ಸದ್ಯಕ್ಕೆ ಮೆಜೆಸ್ಟಿಕ್ನಿಂದ ಏರ್ಪೋರ್ಟ್ಗೆ ನಡುವೆ ಪ್ರತಿದಿನ 10 ಡೆಮು ರೈಲುಗಳು ಸಂಚಾರ ನಡೆಸಲಿವೆ. ಕೋವಿಡ್ ಕಾರಣ ಹಾಗೂ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲಿನ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ರೈಲ್ವೆ ವಿಭಾಗೀಯ ಮ್ಯಾನೇಜರ್ ಎ.ಕೆ ವರ್ಮಾ ತಿಳಿಸಿದ್ದಾರೆ.
ವಿಮಾನಗಳ ಸಮಯವನ್ನು ಗಮನದಲ್ಲಿಟ್ಟುಕೊಂಡು ರೈಲಿನ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮೊದಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಅನುಕೂಲವಾಗುವಂತೆ ರೈಲು ವ್ಯವಸ್ಥೆ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








