ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಿರುವ ಶಾಲೆಗಳನ್ನು ಜನವರಿ 1ರಿಂದ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿರುವ ಬೆನ್ನಲ್ಲೇ, ಪ್ರಸಕ್ತ ಶೈಕ್ಷಣಿಕ ವರ್ಷದ ಸಿಲಬಸ್ ಕಡಿತ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ ಪಠ್ಯ ಕಡಿತ ಮಾಡುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳುತ್ತಲೇ ಬಂದಿದ್ದರು. ಇದೀಗ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷವನ್ನು 2020 ಸೆಪ್ಟೆಂಬರ್ 1ರಿಂದ ಮಾರ್ಚ್ 31ಕ್ಕೆ ನಿಗದಿಪಡಿಸಿದೆ. ಜತೆಗೆ ಪಠ್ಯ ಕಡಿತಗೊಳಿಸಿ ಬೋದನಾ ಅವಧಿಯನ್ನು 180ರಿಂದ 120ಕ್ಕೆ ಇಳಿಸಿದೆ.

ಪ್ರತಿ ವರ್ಷದ ಶೈಕ್ಷಣಿಕ ಅವಧಿ 220, ಇದನ್ನು ಎರಡು ಅವಧಿಗೆ ವಿಂಗಡಣೆ ಮಾಡಲಾಗುತ್ತದೆ. ದಸರಾವರೆಗೆ ಒಂದು ಅವಧಿ, ದಸರಾ ರಜೆ ನಂತರ ಏಪ್ರಿಲ್ 10ರವರೆಗೆ 2ನೇ ಶೈಕ್ಷಣಿಕ ಅವಧಿ ಎಂದು ನಿಗಧಿ ಮಾಡಲಾಗುತ್ತದೆ.

1ನೇ ತರಗತಿಯಿಂದ 10ನೇ ತರಗತಿವರೆಗಿನ ಭೋದನಾ ಅವಧಿಯನ್ನು 120ಕ್ಕೆ ಕಡಿತ ಮಾಡಲಾಗಿದೆ. ಪ್ರತಿ ವಿಷಯದಲ್ಲೂ ಕೆಲ ಪಠ್ಯಗಳನ್ನು ಕೈಬಿಡಲಾಗಿದೆ. ಕೆಲವೇ ಕೆಲವು ಪಠ್ಯಗಳನ್ನು ಭೋದಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ವಿಷಯವಾರು ಭೋದನಾ ಅವಧಿ
ಗಣಿತ-180 ಗಂಟೆಗಳ ಬದಲು-120
ಪರಿಸರ ಅಧ್ಯಯನ-120
ವಿಜ್ಞಾನ-120 ಅವಧಿ
ಸಮಾಜ ವಿಜ್ಞಾನ-120 ಅವಧಿ
ಜನವರಿ 1ರಿಂದ ಶಾಲೆ ಆರಂಭಕ್ಕೆ ಬಿಎಸ್ವೈ ಸೂಚನೆ
ಬೆಂಗಳೂರು: ನಿಗದಿಯಂತೆ ರಾಜ್ಯಾದ್ಯಂತ ಜನವರಿ 1ರಿಂದ ಶಾಲಾ-ಕಾಲೇಜುಗಳು ಪುನರಾರಂಭವಾಗುವುದು ಪಕ್ಕಾ ಆಗಿದೆ.
ಶಾಲೆ ಆರಂಭಿಸುವ ದಿನಾಂಕದಲ್ಲಿ ಯಾವುದೇ ಆದಂತಹ ಬದಲಾವಣೆ ಇಲ್ಲವೇ ಇಲ್ಲ, ಮುಂದೂಡಿಕೆಯಂತೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನ ತೆಗೆದುಕೊಂಡಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ-ಕಾಲೇಜುಗಳನ್ನು ಪುನರಾರಂಭ ಮಾಡುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಶಾಲೆಗಳನ್ನು ಆರಂಭಿಸುವ ಕುರಿತು ಕೊರೊನಾ ರೋಗದ ಸದ್ಯದ ಸ್ಥಿತಿಗತಿ ಕುರಿತಂತೆ ಕಾರ್ಯದರ್ಶಿಗಳು, ಅಧಿಕಾರಿಗಳ, ತಜ್ಞರ, ಸಲಹೆಗಳನ್ನು ಮುಖ್ಯಮಂತ್ರಿ ಬಿಎಸ್ವೈ ಪಡೆದಿದ್ದಾರೆ. ಈ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದ ಸಲಹೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಶಾಲಾ-ಕಾಲೇಜುಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮಾತಿಗೆ ಆರೋಗ್ಯ ಸಚಿವ ಸುಧಾಕರ್ರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಲ್ಲರ ಅಭಿಪ್ರಾಯ ಪಡೆದ ಯಡಿಯೂರಪ್ಪ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಶಾಲಾ-ಕಾಲೇಜುಗಳ ಪುನರಾರಂಭ ವಿಚಾರವಾಗಿ ಮಾರ್ಗಸೂಚಿಗಳು ಸರಿಯಾದ ರೀತಿಯಲ್ಲಿ ಅನುಸರಿಸಲೇಬೇಕು. ಎಂದು ರಾಜ್ಯದ ಎಲ್ಲಾ ಜಿಲ್ಲಾಡಳಿತಗಳ ಜಿಲ್ಲಾಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲಿಸುವಂತೆ ಸೂಚನೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








