ಮನೆ ಬಾಗಿಲಿಗಿ ಬರಲಿದೆ ಜನನ, ಮರಣ ಪ್ರಮಾಣ ಪತ್ರ
ಮಂಗಳೂರು : ಇನ್ನು ಮುಂದೆ ಜನನ, ಮರಣ ಪತ್ರ ಮನೆ ಬಾಲಿಗೆ ಬರಲಿದೆ. ಹೌದು ಈ ಸಂಬಂಧ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗವು ನಗರದ ಲೇಡಿಗೋಷನ್ ಸರಕಾರಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಜನನ, ಮರಣ ಪತ್ರಕ್ಕಾಗಿ ಸಾರ್ವಜನಿಕರು ಮಂಗಳೂರು ಮಹಾನಗರ ಪಾಲಿಕೆ ಎದರು ಕ್ಯೂ ನಿಲ್ಲಬೇಕಾಗುತ್ತಿತ್ತು. ಹೀಗಾಗಿ ಇದನ್ನು ತಪ್ಪಿಲು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಒಡಂಬಡಿಕೆ ಪ್ರಕಾರ ಮುಂದಿನ ದಿನಗಳಲ್ಲಿ ಜನನ ಪ್ರಮಾಣ ಪತ್ರವು ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲಪುತ್ತದೆ. ಇನ್ನೂ ಅರ್ಜಿ ಸಲ್ಲಿಸುವ ವಿಧಾನ ಸರಳ ವಿಧಾನದಲ್ಲಿದ್ದು, 100 ರೂ. ಅನ್ನು ಪೋಸ್ಟ್ ಮ್ಯಾನ್ಗೆ ಸಲ್ಲಿಸಿ ಜನನ ಪ್ರಮಾಣಪತ್ರ ಪಡೆಯಲು ಸಮ್ಮತಿಯಿದೆ ಎಂದು ಸಹಿ ಹಾಕಬೇಕು. ಪ್ರಮಾಣಪತ್ರ ಮುದ್ರಣಗೊಂಡ ತಕ್ಷಣ ಸ್ಪೀಡ್ ಪೋಸ್ಟ್ನಲ್ಲಿ ಮನೆಗೆ ಬರಲಿದೆ.
ಇನ್ನೂ ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು 400-600 ಶಿಶುಗಳ ಜನನವಾಗುತ್ತದೆ. ರಾಜ್ಯದ 9 ಜಿಲ್ಲೆಗಳ, ಕೇರಳ ರಾಜ್ಯದ ಮೂರು ಜಿಲ್ಲೆಗಳ ಗರ್ಭಿಣಿಯರು ಈ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗುತ್ತಾರೆ. ಸದ್ಯ ಲೇಡಿಗೋಷನ್ ಆಸ್ಪತ್ರೆಯಲ್ಲಿ ಜನಿಸುವ ಶಿಶುಗಳ ಜನನ ಪ್ರಮಾಣ ಪತ್ರಗಳನ್ನು ಆಸ್ಪತ್ರೆಯಲ್ಲಿಯೇ ನೀಡಲಾಗುತ್ತದೆ.