ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಗೆ ಬಂದರೆ ಒಂದು ಕಲ್ಲಲ್ಲಿ ಮೂರು ಹಕ್ಕಿ!; ಶಿರಸಿಯಲ್ಲಿ ದೇಶಪಾಂಡೆಯ ಕುತಂತ್ರದ ರಾಜಕಾರಣ ವರ್ಸಸ್ ಸುಷ್ಮಾ ರಾಜಗೋಪಾಲ ರೆಡ್ಡಿ

admin by admin
September 12, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಗೆ ಬಂದರೆ ಒಂದು ಕಲ್ಲಲ್ಲಿ ಮೂರು ಹಕ್ಕಿ!; ಶಿರಸಿಯಲ್ಲಿ ದೇಶಪಾಂಡೆಯ ಕುತಂತ್ರದ ರಾಜಕಾರಣ ವರ್ಸಸ್ ಸುಷ್ಮಾ ರಾಜಗೋಪಾಲ ರೆಡ್ಡಿ:

ಉತ್ತರ ಕನ್ನಡದ ರಾಜಕಾರಣ ಯಾವತ್ತಿಗೂ ಅರ್ಥವಾಗದ ನಿಗೂಢ ವಿದ್ಯಮಾನ. ಅಲ್ಲಿ ರಾಜಕಾರಣ ಹೆಚ್ಚು ಸದ್ದು ಮಾಡುವುದಿಲ್ಲ ಸುದ್ದಿಯೂ ಆಗುವುದಿಲ್ಲ. ಅನಂತ್ ಕುಮಾರ್ ಹೆಗಡೆಯೊಬ್ಬರನ್ನು ಹೊರತುಪಡಿಸಿ ಉಳಿದ ರಾಜಕಾರಣಿಗಳು ಸುದ್ದಿ ಗದ್ದಲಗಳಲ್ಲಿ ಕಾಣಿಸಿಕೊಳ್ಳುವುದೂ ವಿರಳ. ಇನ್ನು ಶಿರಸಿ ಸಿದ್ದಾಪುರದ ರಾಜಕಾರಣವಂತೂ ಒಳಗೊಳಗೇ ಬೇಯುವ ಹಿಟ್ಟಿನ ಕಡುಬಿನಂತೆ. ಎಲ್ಲವೂ ತೆರೆಮರೆಯಲ್ಲೇ ನಡೆದು ಹೋಗುತ್ತವೆ. ಸುದ್ದಿ ಮಾಡುವವರ ಇಶಾರೆಗೂ ಅದು ದಕ್ಕುವಂತದ್ದಲ್ಲ. ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಒಂದಷ್ಟು ಒಳಗೊಳಗೆ ಕಸರತ್ತುಗಳು ನಡೆಯುತ್ತಿವೆ. ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ನಿಮಗಿಲ್ಲಿ ಬೂದಿ ಗುಡ್ಡೆ ಮುಚ್ಚಿದ ರಾಶಿಯೊಳಗಿಂದ ಸಣ್ಣಗೆ ಹೊಗೆಯೊಂದು ಸುಳಿ ತಿರುಗುತ್ತಿರುವುದು ಅರಿವಿಗೆ ಬಂದೀತು.

Related posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

March 21, 2026
ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

March 21, 2026

ಮೊನ್ನೆ ಮೊನ್ನೆ ಸಿಕ್ಕ ವರ್ತಮಾನದ ಅನ್ವಯ ಕಳೆದ ಎರಡೂ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಈ ವದಂತಿ ಹಿಂದೆಯೂ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿ ಜನತಾ ಪರಿವಾರದ ನೇತಾರರಾಗಿದ್ದ ಪ್ರಭಾವಿ ನಾಯಕ ರಾಮಕೃಷ್ಣ ಹೆಗಡೆಯವರ ಮೊಮ್ಮಗ ಈ ಶಶಿಭೂಷಣ್ ಹೆಗಡೆ. ಅಷ್ಟಕ್ಕೂ ಜೆಡಿಎಸ್ ನಿಂದ ಪದೇ ಪದೇ ಸ್ಫರ್ಧಿಸಿ ಸೋತು ಸುಣ್ಣವಾಗಿರುವ ಶಶಿಭೂಷಣ್ ಹೆಗಡೆಗೆ ಈಗ ತಮ್ಮ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ ಕಾಂಗ್ರೆಸ್ ಗೆ ಸೇರುವುದಷ್ಟೆ. ಅದು ಸುದ್ದಿಯಲ್ಲ ಎನ್ನುತ್ತೀರಾದರೇ ಇಲ್ಲೊಂದು ಟ್ವಿಸ್ಟ್ ಇದೆ. ಶಶಿಭೂಷಣ್ ಹೆಗಡೆಯವರನ್ನು ಕಾಂಗ್ರೆಸ್ ಅಂಗಳಕ್ಕೆ ಕರೆತರುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪ್ರಭಾವಿ ನಾಯಕ ಆರ್.ವಿ ದೇಶಪಾಂಡೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಶಿರಸಿ ಸಿದ್ದಾಪುರದಲ್ಲಿ ಅತ್ಯಂತ ಹೆಚ್ಚು ಮತ ಹೊಂದಿರುವ ಹವ್ಯಕ ಬ್ರಾಹ್ಮಣರನ್ನು ಗಣನೆಗೆ ಇಟ್ಟುಕೊಂಡಲ್ಲಿ ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಗೆ ಬಂದರೆ ಖಂಡಿತಾ ಲಾಭವಿದೆ. ಈಗಾಗಲೇ ಪಾದುಕಾಶ್ರಮದ ಕಲ್ಯಾಣಿಗೆ ಕೊಳಚೆ ನೀರು ಹರಿದ ವಿದ್ಯಮಾನದಲ್ಲಿ ಶಿರಸಿಯ ಒಂದು ಬಣದ ಹವ್ಯಕ ಬ್ರಾಹ್ಮಣರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಅಸಮಧಾನವಿದೆ. ಜೊತೆಗೆ ಅಭಿವೃದ್ಧಿ ವಿಚಾರದಲ್ಲಿಯೂ ಕಾಗೇರಿ ಕೆಲಸ ಮಾಡುತ್ತಿಲ್ಲ ಅನ್ನುವ ಬೇಸರವಿದೆ.

ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸ್ಫರ್ಧಿಸಿ ಮತ್ತೊಮ್ಮೆ ಸೋಲಿನ ರುಚಿ ಕಂಡ ಶಶಿಭೂಷಣ್ ಹೆಗಡೆ ನಂತರ ರಾಜಕೀಯ ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದರು. ಅದಾದ ನಂತರ ಅನರ್ಹರ ಪಟ್ಟಿಯಲ್ಲಿ ಕಾಣಿಸಿಕೊಂಡು ಮೈತ್ರಿ ಸರ್ಕಾರವನ್ನು ಬೀಳಿಸಿದರಲ್ಲ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಹೀಗಾಗಿ ಮತ್ತೆ ಉಪಚುನಾವಣೆ ನಡೆದಾಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಶಾಂತ್ ದೇಶಪಾಂಡೆ, ಭೀಮಣ್ಣ ನಾಯ್ಕ್ ಜೊತೆ ಶಶಿಭೂಷಣ್ ಹೆಗಡೆಯವರೂ ಟಿಕೆಟ್ ಆಕಾಂಕ್ಷಿ ಎನ್ನುವ ಸುದ್ದಿಗಳಿದ್ದವು. ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಗೇರಿ ವಿರುದ್ಧ ಕಾಂಗ್ರೆಸ್ ನಿಂದ ಸ್ಫರ್ಧಿಸಿ ಮಣ್ಣುಮುಕ್ಕಿದ್ದ ಭೀಮಣ್ಣ ನಾಯ್ಕ್ ರಿಗೆ ಮತ್ತೆ ಅವಕಾಶ ನೀಡಿ ಯಲ್ಲಾಪುರ ಉಪಚುನಾವಣೆಯ ಟಿಕೆಟ್ ನೀಡಲಾಯ್ತು. ಶಿವರಾಮ್ ಹೆಬ್ಬಾರ್ ವಿರುದ್ಧ ಒಳ ಒಪ್ಪಂದ ಮಾಡಿಕೊಂಡು ಸೋಲನ್ನು ಒಪ್ಪಿಕೊಂಡರು ಭೀಮಣ್ಣ ಎನ್ನುವ ಆಪಾದನೆಯೂ ಕೇಳಿ ಬಂದಿತು. ಈಗ ಸದ್ಯ ಶಿರಸಿ ಸಿದ್ದಾಪುರ ಭಾಗದಲ್ಲಿ ಭೀಮಣ್ಣ ನಾಯ್ಕ್ ನಿಷ್ಕ್ರಿಯ ನಾಯಕ. ಇದೇ ಕಾರಣದಿಂ ಶಶಿಭೂಷಣ್ ಹೆಗಡೆಯವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನಗಳಾಗುತ್ತಿವೆಯೇ?

ಇಲ್ಲ! ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಚಾರವಿದೆ. ಶಿರಸಿ ಸಿದ್ದಾಪುರದ ಸುತ್ತಮುತ್ತ ಪ್ರದೇಶದಲ್ಲಿ ದೀಪಕ್ ಹೊನ್ನಾವರ್ ಹೆಸರು ಕೇಳದೇ ಇರುವವರು ಇಲ್ಲ. 2013ರ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್ ನಿಂದ ಸ್ಫರ್ಧಿಸಿದ್ದ ದೀಪಕ್ ಹೊನ್ನಾವರ ತೀವ್ರ ಪ್ರತಿರೋಧ ಒಡ್ಡಿ ಕೇವಲ 3 ಸಾವಿರ ಮತಗಳಿಂದ ಪರಾಭವಗೊಂಡಿದ್ದರು. ಈ ಭಾಗದಲ್ಲಿ ಅತ್ಯಂತ ಪ್ರಭಾವಿ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದರು ದೀಪಕ್ ಹೊನ್ನಾವರ. ಅಂಕೋಲಾ ಬಳಿ ರಸ್ತೆ ಅಪಘಾತದಲ್ಲಿ ನಿಧನ ಹೊಂದದಿದ್ದರೇ ಈ ಹೊತ್ತಿಗಾಗಲೇ ದೀಪಕ್ ಹೊನ್ನಾವರ ಅಲ್ಲಿನ ಶಾಸಕರಾಗಿರುತ್ತಿದ್ದರು. ಶಿರಸಿ ಕ್ಷೇತ್ರದ ನಿರ್ಣಾಯಕ ಮತದಾರ ಸಮುದಾಯವಾಗಿರುವ ನಾಮದಾರಿ ಸಮಾಜದ ದೊಡ್ಡ ಬೆಂಬಲ ದೀಪಕ್ ಅವರಿಗಿತ್ತು. ಈಗ ದೀಪಕ್ ಹೊನ್ನಾವರ ಅವರ ಸಹೋದರಿ ಸುಷ್ಮಾ ರಾಜಗೋಪಾಲ ರೆಡ್ಡಿಯವರು ಸಿದ್ದಾಪುರ ಮತ್ತು ಶಿರಸಿ ಸುತ್ತಮುತ್ತ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಲು ನಿರಂತರವಾಗಿ ಓಡಾಡುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಬದುಕಿದ್ದಾಗ ದೀಪಕ್ ಹೊನ್ನಾವರ ಅವರಿಗೂ ಆರ್.ವಿ ದೇಶಪಾಂಡೆಯವರಿಗೂ ನಡುವಿನ ಸಂಬಂಧ ಅಷ್ಟಕಷ್ಟೆ ಎಂಬಂತಿತ್ತು. ಈಗ ಶಿರಸಿ ಸಿದ್ದಾಪುರ ಬ್ಲಾಕ್ ಗಳಲ್ಲಿ ಚಟುವಟಿಕೆಯಿಂದ ಓಡಾಡುತ್ತಿರುವ ಸುಷ್ಮಾ ರಾಜಗೋಪಾಲ ರೆಡ್ಡಿವರು ಡಿಕೆ ಶಿವಕುಮಾರ್ ಪಾಳೆಯದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸುಷ್ಮಾರಿಗೆ ಶಿರಸಿ ಸಿದ್ದಾಪುರದ ಕಾಂಗ್ರೆಸ್ ಟಿಕೆಟ್ ಸಿಗುವುದು ದೇಶಪಾಂಡೆಯವರಿಗೆ ಸುತರಾಂ ಇಷ್ಟವಿಲ್ಲ.

ಹೀಗಾಗಿ ಸಿದ್ದರಾಮಯ್ಯನವರ ಮೂಲಕ ಶಶಿಭೂಷಣ್ ಹೆಗಡೆಯವರನ್ನು ಕಾಂಗ್ರೆಸ್ ಮನೆ ಸೇರಿಸಲು ಆರ್.ವಿ ದೇಶಪಾಂಡೆ ಕಸರತ್ತು ಮಾಡುತ್ತಿದ್ದಾರೆ. ಹೇಗಿದ್ದರೂ ಸಿದ್ದರಾಮಯ್ಯನವರ ರಾಜಕೀಯ ಗುರು ರಾಮಕೃಷ್ಣ ಹೆಗಡೆಯವರು, ಅವರ ಮೊಮ್ಮಗನಿಗೆ ಟಿಕೆಟ್ ಕೊಡಿಸಿದರೆ ಗುರುವಿನ ಋಣ ಸಂದಾಯವಾಗುತ್ತದೆ ಎಂಬ ಲೆಕ್ಕಾಚಾರವೂ ಇಲ್ಲಿದೆ. ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಡಿಕೆ ಶಿವಕುಮಾರ್ ಪಾಳೆಯದ ಅಭ್ಯರ್ಥಿಗಳಿಗೆ ಸಾಧ್ಯವಾದಷ್ಟು ಟಿಕೆಟ್ ಕಡಿತಗೊಳಿಸಬೇಕು ಎನ್ನುವ ರಾಜಕಾರಣವೂ ಕೆಲಸ ಮಾಡುತ್ತಿದೆ. ಈ ಓಳಮರ್ಮಗಳ ಅರಿವಿದ್ದೂ ಸುಷ್ಮಾ ರಾಜಗೋಪಾಲ ರೆಡ್ಡಿಯವರು ತಲೆ ಕೆಡಿಸಿಕೊಳ್ಳದೆ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಿರುವುದು ಅತ್ತ ಭೀಮಣ್ಣ ನಾಯ್ಕ್ ಗಾಗಲೀ ಇತ್ತ ಆರ್.ವಿ ದೇಶಪಾಂಡೆಯವರಿಗಾಗಲೀ ಅರಗಿಸಿಕೊಳ್ಳಲಾಗ್ತಿಲ್ಲ. ಬೆಳಿಗ್ಗೆ ಶೇರು ವ್ಯವಹಾರ ಮಾಡಿ, ಮಧ್ಯಾಹ್ನ ಉದ್ದಿಮೆಗಳ ವಹಿವಾಟು ನೋಡಿಕೊಂಡು, ಸಮಯ ಸಿಕ್ಕರೆ ಮಾತ್ರ ರಾಜಕಾರಣ ಮಾಡುವ ಆರ್.ವಿ ದೇಶಪಾಂಡೆ ಕಾಂಗ್ರೆಸ್ ನ ಎಂಥಹ ಅವಕಾಶವಾದಿ ರಾಜಕಾರಣಿ ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ಪಕ್ಷದ ಸಂಘಟನೆಯಲ್ಲಾಗಲೀ, ಮಹತ್ವದ ಜವಾಬ್ದಾರಿ ಹೊರುವಲ್ಲಾಗಲೀ ಯಾವತ್ತೂ ಹಿಂದೆ ಉಳಿಯುವ ದೇಶಪಾಂಡೆ ಅಧಿಕಾರ ಬಂದಾಗ ಮಾತ್ರ ದೊಡ್ಡ ಖಾತೆಗೆ ಕೈಒಡ್ಡಿ ನಿಂತುಬಿಡುತ್ತಾರೆ. ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ, ದೇಶಪಾಂಡೆ ಎಂಡ್ ಪಟಾಲಂ ಅನ್ನು ದೂರವಿಟ್ಟಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ.

https://youtu.be/I5BRabD3f5A

ಈ ಎಲ್ಲಾ ಹಿನ್ನೆಲೆಯಲ್ಲಿ ಶಶಿಭೂಷಣ್ ಹೆಗಡೆ ಕಾಂಗ್ರೆಸ್ ಪಡಸಾಲೆಗೆ ಬರುವ ವಿಚಾರದಲ್ಲಿ ಸಾಕಷ್ಟು ಒಳಸುಳಿಗಳಿವೆಯಾದರೂ, ಅದರಿಂದ ಕಾಂಗ್ರೆಸ್ ಗೆ ಲಾಭವಂತೂ ಖಂಡಿತಾ ಇದೆ. ಆದರೆ ಶಶಿಭೂಷಣ್ ಹೆಗಡೆಗೆ ಟಿಕೆಟ್ ಸಿಗುವುದು ಅಷ್ಟು ಸುಲಭವಿಲ್ಲ. ಈಗಾಗಲೇ ಶಿರಸಿ ಸುತ್ತಮುತ್ತ ಕಾರ್ಯಕರ್ತರ ವಲಯದಲ್ಲಿ ಸುಷ್ಮಾ ರಾಜಗೋಪಾಲ ರೆಡ್ಡಿಯವರ ನಾಯಕತ್ವದಲ್ಲಿ ನಂಬಿಕೆ ವಿಶ್ವಾಸಗಳು ಹುಟ್ಟಿವೆ. ಜೊತೆಗೆ ಭೀಮಣ್ಣ ನಾಯ್ಕ್ ನಿಷ್ಕ್ರಿಯತೆ ಕುರಿತಾದ ಅಸಮಧಾನವೂ ಇದೆ. ಗತಿಸಿದ ನಾಯಕ ದೀಪಕ್ ಹೊನ್ನಾವರ ಅವರ ಸಹೋದರಿ ಎನ್ನುವ ಅಭಿಮಾನವಿದೆ. ಇಷ್ಟನ್ನೇ ಗಣನೆಗೆ ಇಟ್ಟುಕೊಂಡಲ್ಲಿ ಸುಷ್ಮಾರಿಗೆ ಈ ಬಾರಿ ಟಿಕೆಟ್ ಸಿಗುವುದರಲ್ಲಿ ಸಂದೇಹಗಳಿಲ್ಲ; ಆರ್.ವಿ ದೇಶಪಾಂಡೆಗೆ ಮುಖಭಂಗ ತಪ್ಪಿದ್ದಲ್ಲ.

-ವಿಶ್ವಾಸ್ ಭಾರದ್ವಾಜ್ (ವಿಭಾ)

Tags: # Sushma Rajagopala Reddy#R.v.deshapande#sirasi#uttara kanandabengalurud k shivakumarDKShiKarnataka politicskpcc
ShareTweetSendShare
Join us on:

Related Posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

by Shwetha
March 21, 2026
0

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

by Shwetha
March 21, 2026
0

ಬೆಂಗಳೂರು ನಗರದ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ದಿಶೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಟೆಂಡರ್ ಆಹ್ವಾನಿಸಿದೆ. ಈ ಕುರಿತು ಎಮ್. ಬಿ. ಪಾಟೀಲ್ ಪ್ರತಿಕ್ರಿಯಿಸಿ,...

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

by Shwetha
March 21, 2026
0

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಕಾರ್ಮೋಡದ ನಡುವೆಯೇ ಇರಾನ್ ಜಗತ್ತಿನ ಪ್ರಮುಖ ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇದು ಜಾಗತಿಕ...

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

by Shwetha
March 21, 2026
0

ಬೆಂಗಳೂರು: ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ನೀವು ಇದುವರೆಗೆ ನಿಮಗೆ ಇಷ್ಟ ಬಂದ...

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

by Shwetha
March 21, 2026
0

ಬೆಂಗಳೂರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೇವಲ ತನ್ನ ಪಕ್ಷದ ಹೈಕಮಾಂಡ್‌ಗೆ ಹಣ ಒದಗಿಸುವ ಮೂಲವನ್ನಾಗಿ ಮಾಡಿಕೊಂಡಿದೆ ಎಂದು ದಿವಂಗತ ಕೇಂದ್ರ ಸಚಿವ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram