ಆ್ಯಪಲ್ ಐಫೋನ್ 15 ಸ್ಮಾರ್ಟ್ಫೋನ್ನಲ್ಲಿ ಇಸ್ರೋ ಅಭಿವೃದ್ಧಿಪಡಿಸಿದ ದೇಶಿ ಜಿಪಿಎಸ್ ನಾವಿಕ್ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಬಳಕೆ ಮಾಡಲಾಗಿದೆ ಎನ್ನಲಾಗಿದೆ.
ಇನ್ಮುಂದೆ ಎಲ್ಲ 5ಜಿ ಸ್ಮಾರ್ಟ್ಫೋನ್ಗಳಿಗೂ ನಾವಿಕ್ ಬಳಕೆ ಕಡ್ಡಾಯಗೊಳಿಸಲು ಸರ್ಕಾರ ಪ್ಲ್ಯಾನ್ ಮಾಡುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ನ್ಯಾವಿಗೇಷನ್ ವಿಥ್ ದಿ ಇಂಡಿಯನ್ ಕಾನ್ಸ್ಟೆಲೇಷನ್ (ನ್ಯಾವಿಕ್) ಎಂಬುದು ಇಸ್ರೋ ಅಭಿವೃದ್ಧಿಪಡಿಸಿದ ಸ್ಥಳೀಯ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಇದಾಗಿದೆ. ಐಫೋನ್ 15 ಸರಣಿಯ ಪ್ರೋ ಮಾದರಿಗಳು NavIC ತಂತ್ರಜ್ಞಾನವನ್ನು ಬೆಂಬಲಿಸುತ್ತವೆ. ಆ್ಯಪಲ್ ತನ್ನ ಸಾಧನಗಳಲ್ಲಿ ಭಾರತದಲ್ಲಿ ತಯಾರಿಸಿದ ಜಿಪಿಎಸ್ ಪರ್ಯಾಯ ಸಂಯೋಜಿಸುತ್ತದೆ. ಭಾರತದಲ್ಲಿ ಬಿಡುಗಡೆಯಾದ 5G ಸ್ಮಾರ್ಟ್ಫೋನ್ಗಳು NavIC-ಚಾಲಿತ ಚಿಪ್ಗಳಿಗೆ ಬೆಂಬಲವನ್ನು ಒದಗಿಸುವ ಅಗತ್ಯವಿದೆ.