ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡುವ ಮನೆಯಲ್ಲೇ ತಯಾರಿಸಬಲ್ಲ ಡಿಟಾಕ್ಸ್ ಪಾನೀಯಗಳು

Shwetha by Shwetha
January 16, 2021
in Health, Newsbeat, ಆರೋಗ್ಯ, ನ್ಯೂಸ್ ಬೀಟ್
Saakshatv healthtips detox drinks
Share on FacebookShare on TwitterShare on WhatsappShare on Telegram

ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡುವ ಮನೆಯಲ್ಲೇ ತಯಾರಿಸಬಲ್ಲ ಡಿಟಾಕ್ಸ್ ಪಾನೀಯಗಳು Saakshatv healthtips detox drinks

ಮಂಗಳೂರು, ಜನವರಿ16: ಹೆಸರೇ ಸೂಚಿಸುವಂತೆ, ನಿರ್ವಿಶೀಕರಣವು (ಡಿಟಾಕ್ಸ್) ಒಂದು ಪ್ರಕ್ರಿಯೆಯಾಗಿದ್ದು ಅದು ಪ್ರಮುಖ ಅಂಗಗಳು ಶುದ್ಧೀಕರಿಸಲು ಸಹಾಯ ಮಾಡುತ್ತದೆ. Saakshatv healthtips detox drinks

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಶಕ್ತಿಯ ಮಟ್ಟಗಳು ಅಥವಾ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತಿದೆ ಎನಿಸಿದಾಗ ಅಥವಾ ಚರ್ಮ ಮತ್ತು ಜೀರ್ಣಾಂಗ ವ್ಯವಸ್ಥೆಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂದಾಗ ನಮ್ಮಲ್ಲಿ ಹೆಚ್ಚಿನವರು ಡಿಟಾಕ್ಸ್ ನಂತಹ ಚಿಕಿತ್ಸೆ ಪ್ರಾರಂಭಿಸುತ್ತಾರೆ.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Saakshatv healthtips detox drinks

ಡಿಟಾಕ್ಸ್ ಎಂದರೇನು ಮತ್ತು ಡಿಟಾಕ್ಸ್ ಪಾನೀಯಗಳು ಯಾವುವು:

ಇದು ಪ್ರಾಚೀನ ಚಿಕಿತ್ಸೆಯಾಗಿದ್ದು, ಇದನ್ನು ನೂರಾರು ವರ್ಷಗಳಿಂದ ವಿವಿಧ ರೂಪಗಳಲ್ಲಿ ಅಭ್ಯಾಸ ಮಾಡಲಾಗುತ್ತಿದೆ.

ಇದು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ. ದೇಹವು ತ್ಯಾಜ್ಯ ಉತ್ಪನ್ನಗಳು ಮತ್ತು ಗಾಳಿ, ಮಣ್ಣು, ನೀರು ಮತ್ತು ಆಹಾರದಿಂದ ಹೀರಿಕೊಳ್ಳುವ ವಿವಿಧ ಜೀವಾಣುಗಳನ್ನು ಹಾಗೂ ದೇಹದಿಂದ ಉತ್ಪತ್ತಿಯಾಗುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ದೇಹದ ಶುದ್ಧೀಕರಣ ವ್ಯವಸ್ಥೆಯಾಗಿದೆ. ‌

ಹೊಟ್ಟೆ‌ ಉಬ್ಬುವುದು, ಗ್ಯಾಸ್ಟ್ರಿಕ್‌, ತಲೆನೋವು, ಮಲಬದ್ಧತೆ, ತಲೆನೋವು, ಆಯಾಸ, ವಾಕರಿಕೆ ಮತ್ತು ಚರ್ಮದ ತೊಂದರೆಗಳಂತಹ ವಿವಿಧ ಸಮಸ್ಯೆಗಳನ್ನು ನಿವಾರಿಸಲು ಡಿಟಾಕ್ಸ್ ಪಾನೀಯಗಳು ಸಹಾಯ ಮಾಡುತ್ತದೆ.

ಪ್ರಾಚೀನ ಕಾಲದ ನೈಸರ್ಗಿಕ ಮನೆಮದ್ದುಗಳು ಮಾನವ ದೇಹವನ್ನು ಸುರಕ್ಷಿತವಾಗಿ ಶುದ್ಧೀಕರಿಸುತ್ತದೆ, ತೂಕ ಇಳಿಸಲು ಸಹಾಯ ಮಾಡುತ್ತದೆ, ಚಯಾಪಚಯ ಕ್ರಿಯೆಗೆ ಉತ್ತೇಜನ ನೀಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡುವ ಡಿಟಾಕ್ಸ್ ಪಾನೀಯಗಳು

ಆಪಲ್ ಸೈಡರ್ ವಿನೆಗರ್ ಇನ್ಫ್ಯೂಸ್ಡ್ ಡ್ರಿಂಕ್

ಪದಾರ್ಥಗಳು:
ಬೆಚ್ಚಗಿನ ನೀರು – 1 ಕಪ್
ಆಪಲ್ ಸೈಡರ್ ವಿನೆಗರ್ – 2 ಚಮಚ
ತಾಜಾ ನಿಂಬೆ ರಸ – 2 ಚಮಚ
ನೈಸರ್ಗಿಕ ಮತ್ತು ಶುದ್ಧ ಜೇನುತುಪ್ಪ – 1 ಚಮಚ
ದಾಲ್ಚಿನ್ನಿ – 1 ಚಮಚ
ಒಂದು ಪಿಂಚ್ ಕೆಂಪುಮೆಣಸಿನ ಹುಡಿ

ತಯಾರಿಸುವುದು ಹೇಗೆ: ಬೆಚ್ಚಗಿನ 1 ಕಪ್ ನೀರಿಗೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಬೆರೆಸಿ. ನಿಮ್ಮ ಬೆಳಗಿನ ಡಿಟಾಕ್ಸ್ ಪಾನೀಯ ಸಿದ್ಧ.

ಪಪ್ಪಾಯಿ ಎಲೆಗಳ 6 ಸೂಪರ್ ಪವರ್‌ಫುಲ್ ಆರೋಗ್ಯ ಪ್ರಯೋಜನಗಳು

ಡಿಟಾಕ್ಸ್ ಅರಿಶಿನ-ಶುಂಠಿ ಚಹಾ

ಅರಿಶಿನ ಮತ್ತು ಶುಂಠಿಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಅಂಶಗಳನ್ನು ಒಳಗೊಂಡಿದೆ. ತಾಜಾ ಅಥವಾ ಒಣಗಿದ ಮತ್ತು ಪುಡಿ ಮಾಡಿದ ಮಸಾಲೆಗಳಾಗಿ ಬಳಸಬಹುದು.
ಅರಿಶಿನವು ಅತ್ಯಂತ ಶಕ್ತಿಯುತವಾದ ಪಿತ್ತಜನಕಾಂಗವನ್ನು ಶುದ್ಧೀಕರಿಸುವ ಮಸಾಲೆಯಾಗಿದೆ. ಇದು ಪಿತ್ತಜನಕಾಂಗದ ಕಾರ್ಯವನ್ನು ಸುಧಾರಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿಯು ರೋಗನಿರೋಧಕ ಶಕ್ತಿಯ ಮತ್ತು ಉರಿಯೂತದ ಮೂಲಿಕೆಯಾಗಿದೆ.

ಅರಿಶಿನ-ಶುಂಠಿ ಟೀ ಪಾಕವಿಧಾನ ಇಲ್ಲಿದೆ.
ಪದಾರ್ಥಗಳು:
1/2 ಟೀಸ್ಪೂನ್ ಅರಿಶಿನ ಪುಡಿ
1/2 ಟೀಸ್ಪೂನ್ ಕತ್ತರಿಸಿದ ಶುಂಠಿ
1/4 ಟೀಸ್ಪೂನ್ ಕರಿಮೆಣಸು
1 ಟೀಸ್ಪೂನ್ ನೈಸರ್ಗಿಕ ಮತ್ತು ಶುದ್ಧ ಜೇನುತುಪ್ಪ
2 ಕಪ್ ನೀರು
ಹೇಗೆ ತಯಾರಿಸುವುದು: ತಳಭಾಗ ದಪ್ಪವಾಗಿರುವ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ನೀರು ಕುದಿಯುವಾಗ ಅದಕ್ಕೆ ಈ ಮೇಲಿನ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಬೆರೆಸಿ. ನೀರಿನ ಪ್ರಮಾಣವು ಮೂರನೇ ಒಂದು ಭಾಗದಷ್ಟು ಕಡಿಮೆಯಾದ ನಂತರ ಕೆಳಗಿಳಿಸಿ. ಬೆಚ್ಚಗಿರುವಾಗಲೇ ಅದನ್ನು ಕುಡಿಯಿರಿ.

ಬೇಸಿಗೆ ಕಾಲದ ಡಿಟಾಕ್ಸ್ – ಆಮ್ ಪನ್ನಾ

ಆಮ್ ಅಥವಾ ಮಾವಿನಹಣ್ಣು ಹೆಚ್ಚಾಗಿ ಬೇಸಿಗೆಯ ಹಣ್ಣು. ಆಮ್ ಪನ್ನಾ ಕೇವಲ ಡಿಟಾಕ್ಸ್ ಮಾತ್ರವಲ್ಲ ಕೂಲಿಂಗ್ ಡ್ರಿಂಕ್ ಕೂಡ ಆಗಿದೆ.

ಪದಾರ್ಥಗಳು:
500 ಗ್ರಾಂ ಹಸಿರು ಮಾವಿನಹಣ್ಣು
1/2 ಕಪ್ ಸಕ್ಕರೆ
2 ಟೀಸ್ಪೂನ್ ಉಪ್ಪು
2 ಟೀಸ್ಪೂನ್ ಕಪ್ಪು ಉಪ್ಪು
2 ಟೀಸ್ಪೂನ್ ಹುರಿದ ಮತ್ತು ಪುಡಿ ಮಾಡಿದ ಜೀರಿಗೆ (ಜೀರಾ ಪುಡಿ)
2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಪುದೀನ ಎಲೆಗಳು
2 ಕಪ್ ನೀರು

ತಯಾರಿಸುವುದು ಹೇಗೆ: ಪಾತ್ರೆಯಲ್ಲಿ ಹಸಿರು (ಬಲಿಯದ) ಮಾವಿನಹಣ್ಣನ್ನು ತೆಗೆದುಕೊಂಡು ಸ್ವಲ್ಪ ನೀರಿನ ಉಗಿಯಲ್ಲಿ ಬೇಯಿಸಿ. ಇದಕ್ಕಾಗಿ ಪ್ರೆಶರ್ ಕುಕ್ಕರ್ ಅನ್ನು ನೀವು ಬಳಸಬಹುದು. ನಂತರ ಅದನ್ನು ತಣ್ಣಗಾಗಲು ಬಿಡಿ. ಚರ್ಮವನ್ನು ಸಿಪ್ಪೆ ಮಾಡಿ ಮತ್ತು ತಿರುಳನ್ನು ಅಗಲವಾದ ಪಾತ್ರೆಯಲ್ಲಿ ಹಿಸುಕಿ . ಈಗ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ, ಮಿಶ್ರಣ ಮಾಡಿ ಮತ್ತು 2 ಕಪ್ ನೀರು ಸೇರಿಸಿ. ಕಪ್ ಗೆ ಆಮ್ ಪನ್ನಾ ಸುರಿಯಿರಿ ಮತ್ತು ಐಸ್ ಕ್ಯೂಬ್ಸ್ ಹಾಗೂ ಪುದೀನ ಎಲೆಗಳನ್ನು ಸೇರಿಸಿ.
Saakshatv healthtips detox drinks

ಶುಂಠಿ ನಿಂಬೆ ಡಿಟಾಕ್ಸ್

ಪದಾರ್ಥಗಳು:
ಕುಡಿಯುವ ನೀರು – 2 ಕಪ್
ತಾಜಾ ನಿಂಬೆ ರಸ- ಅರ್ಧ ನಿಂಬೆ
ಆಪಲ್ ಸೈಡರ್ ವಿನೆಗರ್- ಫಿಲ್ಟರ್ ಮಾಡದ, 2 ರಿಂದ 3 ಚಮಚ
ಶುದ್ಧ ಮತ್ತು ನೈಸರ್ಗಿಕ ಜೇನುತುಪ್ಪ – 2-3 ಚಮಚ
ಸಿಪ್ಪೆ ಸುಲಿದ, ಕತ್ತರಿಸಿದ ಬೆಳ್ಳುಳ್ಳಿ – 1 ಇಂಚು
ಹೇಗೆ ತಯಾರಿಸುವುದು: ಮೇಲಿನ ಎಲ್ಲಾ ಪದಾರ್ಥಗಳನ್ನು ನಿಮ್ಮ ಮಿಕ್ಸಿಯಲ್ಲಿ ಸೇರಿಸಿ ರುಬ್ಬಿ. ಈಗ ನಿಮ್ಮ ಡಿಟಾಕ್ಸ್ ಶುಂಠಿ ನಿಂಬೆ ಪಾನಕ ಸಿದ್ಧವಾಗಿದೆ. ಬೇಸಿಗೆಯ ಸಮಯವಾಗಿದ್ದರೆ ಅದನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿ. ಬಾಯಾರಿಕೆಯಾದಾಗಲೆಲ್ಲಾ ಕಪ್ ಗೆ ಸುರಿದು ಕುಡಿಯಿರಿ.

ತೆಂಗಿನ ನೀರು + ನಿಂಬೆ + ಪುದೀನ ಪಾನೀಯ

ಪದಾರ್ಥಗಳು:
1 ತೆಂಗಿನಕಾಯಿ
ಪುದೀನ ಎಲೆಗಳು
1 ಟೀಸ್ಪೂನ್ ಜೇನುತುಪ್ಪ
1 ನಿಂಬೆ
ಹೇಗೆ ತಯಾರಿಸುವುದು: ಈ ತಂಪಾಗಿಸುವ, ಉಲ್ಲಾಸಕರ ಮತ್ತು ನಿರ್ವಿಷಗೊಳಿಸುವ ಪಾನೀಯವು ತೆಂಗಿನಕಾಯಿಯ ನೀರಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಒಂದು ಪಾತ್ರೆಯಲ್ಲಿ ತೆಂಗಿನಕಾಯಿಯ ಒಳಭಾಗದ ತಿರುಳನ್ನು ತೆಗೆದುಕೊಳ್ಳಿ. ಅದನ್ನು ನುಣ್ಣಗೆ ಪುಡಿಮಾಡಿ ತೆಂಗಿನಕಾಯಿ ನೀರಿಗೆ ಸೇರಿಸಿ. ಈಗ ಪುದೀನ, ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ. ಕೆಲವು ಪುದೀನ ಎಲೆಗಳನ್ನು ಬೆರೆಸಿ .
ಈಗ ತೆಂಗಿನ ನೀರು, ನಿಂಬೆ ಮತ್ತು ಪುದೀನ ದ ಡಿಟಾಕ್ಸ್ ಪಾನೀಯ ‌ಸಿದ್ಧವಾಗಿದೆ.

ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಆದ್ದರಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಮೊಟ್ಟೆಗಳ ಸೇವನೆಯಿಂದ ಮೂತ್ರಪಿಂಡ (ಕಿಡ್ನಿ) ತೊಂದರೆhttps://t.co/f1WeQRvdL9

— Saaksha TV (@SaakshaTv) January 12, 2021

ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ / ಆಧಾರ್ ದಾಖಲೆ ಕಡ್ಡಾಯ ? – ಇಲ್ಲಿದೆ ಮಾಹಿತಿhttps://t.co/CrjHYzvDzK

— Saaksha TV (@SaakshaTv) January 12, 2021

 

Tags: detox drinksSaakshatv healthtipsSaakshatv healthtips detox drinks
ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram